ಉತ್ತರ ಕರ್ನಾಟಕ ಸಮಸ್ಯೆ ಕುರಿತು ಸುದೀರ್ಘ ಚರ್ಚೆ: ಸತೀಶ್

ಹುಬ್ಬಳ್ಳಿ : ಕುಂದಾನಗರಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಗೆ ಎರಡು ದಿನ ಮೀಸಲು ಇಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೂಳಿ ಹೇಳಿದರು. ನಗರದಲ್ಲಿಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು. ಅಧಿವೇಶನದಲ್ಲಿ ಒಳ್ಳೆಯ ಚರ್ಚೆಗಳು ನಡೆದಿವೆ. ನಾಳೆಯೂ ಒಂದು ದಿನ ಉತ್ತರ ಕರ್ನಾಟಕ ಚರ್ಚೆಯಾಗಲಿದ್ದು,

ಮೊದಲ ಬಾರಿಗೆ ಈ ರೀತಿಯ ಚರ್ಚೆಗಳು ನಡೆದಿವೆ. ಉತ್ತರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ ಇದು ಒಳ್ಳೆಯ ವಿಚಾರ ಆಗಿದ್ದು ಏನಾದರೂ ಅಗತ್ಯವಿದ್ದಲ್ಲಿ ಚರ್ಚೆ ವಿಸ್ತರಣೆಯಾಗಲಿದೆ ಎಂದರು. ಇನ್ನೂ ಇದೇ ಸಂದರ್ಭದಲ್ಲಿ ಬಹಳಷ್ಟು ಸಚಿವರು ಅಧಿವೇಶನಕ್ಕೆ ಚಕ್ಕರ್ ವಿಚಾರ ಕುರಿತು ಮಾತನಾಡಿದ ಅವರು, ಯಾವ ಸಚಿವರು ಗೈರಾಗಿಲ್ಲ,

ಎಲ್ಲ ಸಚಿವರು ಅಧಿವೇಶನಕ್ಕೆ ಬಂದಿದ್ದು, ಅವರಿವರನ್ನ ಭೇಟಿಯಾಗೋಕೆ ಎಲ್ಲಾದರೂ ಹೋಗಿರುತ್ತಾರೆ ಸಮಜಾಯಿಷಿದರು‌ಮುಸ್ಲಿಂ ಮುದಾಯಕ್ಕೆ ದೇಶದ ಆಸ್ತಿ ಹಂಚಿಕೆ ವಿಚಾರ ಸಹ ಪ್ರತಿಕ್ರಿಯೆ ಕೊಡಲು ನಿರಾಕರಣೆ ಮಾಡಿದ ಅವರು, ಇದು ಮುಗಿದು ಹೋದ ವಿಚಾರ ಇದರ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು

Loading

Leave a Reply

Your email address will not be published. Required fields are marked *