ಬೀದರ್: ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದೇನೆ. ಈ ಬಾರಿ ರಾಜಶೇಖರ ಪಾಟೀಲ್ ಬಂದರೂ ಸ್ವಾಗತ. ಖಂಡ್ರೆಯವರೇ ನನ್ನ ಎದುರಾಳಿಯಾಗಿ ಮತ್ತೊಮ್ಮೆ ಬಂದರೂ ನೋಡೋಣ. ಸಾಧ್ಯವಾದರೆ ರಾಹುಲ್ ಗಾಂಧಿಯವರನ್ನೇ ಬೇಕಾದರೆ ನನ್ನ ಎದುರು ತಂದು ನಿಲ್ಲಿಸಿ. ಯಾರೇ ನನ್ನ ಎದುರು ನಿಂತರೂ ಜೆಡಿಎಸ್ ಬೆಂಬಲದಿಂದ ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸುವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಶೇಖರ ಪಾಟೀಲ್ಗೆ ಟಿಕೆಟ್ ನೀಡಲು ಖಂಡ್ರೆ ಬಿಡುತ್ತಾರೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಪಾಪ ರಾಜಶೇಖರ ಪಾಟೀಲ್ರು ಸೋತಿದ್ದೇನೆ. ಸತ್ತಿಲ್ಲಎಂದಿದ್ದಾರೆ. ಜೀವಂತ ಇದ್ದಾಗಲೇ ಸುದ್ದಿಗೋಷ್ಠಿ ಮಾಡುತ್ತಿದ್ದೀರಿ. ನೀವು ಸತ್ತಿದ್ದೀರಿ ಅಂತ ಯಾರು ನಿಮಗೆ ಹೇಳಿದ್ದಾರೆ. ಸೋತು ಸುಣ್ಣವಾಗಿ ಮನೆಯಲ್ಲಿ ಕುಳಿತಿದ್ದೀರಿ ಎಂದು ಖೂಬಾ ಲೇವಡಿ ಮಾಡಿದರು.