ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ಇನ್ನಷ್ಟು ನನಸಾಗಲಿ: ಪ್ರಧಾನಿ ಮೋದಿ!

ಬೆಂಗಳೂರು: ಬೋಯಿಂಗ್ ಸುಕನ್ಯಾ ಕಾರ್ಯಕ್ರಮ (Boeing Sukanya Programme) ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ನನಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಇಂದು ನಗರದಲ್ಲಿ ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೊದಲು ಬೆಂಗಳೂರು ಬಗ್ಗೆ ಮೆಚ್ಚುಗೆ ಮಾತನ್ನಾಡಿದರು.

ಜಾಗತಿಕ ಅಗತ್ಯಗಳನ್ನು ಪೂರೈಸುವ ನಗರ ಬೆಂಗಳೂರು ಆಗಿದೆ. ಈ ಬಿಐಇಟಿಸಿ ಕೇಂದ್ರ ವೈಮಾನಿಕ ಕ್ಷೇತ್ರಕ್ಕೆ ದೊಡ್ಡ ಬಲ ಕೊಡಲಿದೆ. ಈ ಕೇಂದ್ರ ಭಾರತದ ಮೇಲೆ ವಿಶ್ವದ ಭರವಸೆ ಇನ್ನಷ್ಟು ಗಟ್ಟಿ ಮಾಡಲಿದೆ ಎಂದರು.

ಭಾರತ ಮಹಿಳಾ ಪೈಲಟ್ ಗಳ ವಿಚಾರದಲ್ಲಿ ಮುಂಚೂಣಿಯಲ್ಲಿದೆ. 15% ಮಹಿಳಾ ಪೈಲಟ್ ಗಳು ದೇಶದಲ್ಲಿದ್ದಾರೆ. ಜಾಗತಿಕ ಪ್ರಮಾಣಕ್ಕಿಂತ ಇದು ಮೂರು ಪಟ್ಟು ಹೆಚ್ಚು ಆಗಿದೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ನನಸಾಗಲಿದೆ. ಚಂದ್ರಯಾನ ಮೂಲಕ ಯಾವ ದೇಶವೂ ಮಾಡದ ಸಾಧನೆ ಮಾಡಿದ್ದೇವೆ. ನಮ್ಮ ಸ್ಥಾನ ವಿಶ್ವದಲ್ಲಿ ಇನ್ನೂ ಮೇಲಿನ ಸ್ತರಕ್ಕೆ ಈ ಮೂಲಕ ಹೋಗಿದೆ ಎಂದು ಮೋದಿ ತಿಳಿಸಿದರು.

Loading

Leave a Reply

Your email address will not be published. Required fields are marked *