ಬೆಳಗಾವಿ: ತಡರಾತ್ರಿ ಸಿಲಿಂಡರ್ ಸ್ಪೋಟ; 9 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಜನ ಗಂಭೀರ ಗಾಯ!

ಬೆಳಗಾವಿ:- ತಡರಾತ್ರಿ ಸಿಲಿಂಡರ್ ಸ್ಫೋಟಗೊಂಡು 9 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಜನರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ‌ಅಕ್ಕತಂಗೇರಹಾಳ ಗ್ರಾಮದಲ್ಲಿ ಜರುಗಿದೆ.

ನಿರ್ವಾಣಿ, ಅಶೋಕ ನಿರ್ವಾಣ, ಸೋಮನಗೌಡ, ದೀಪಾ, ನವೀನ , ವಿದ್ಯಾ ,ಬಸನಗೌಡ ನಿರ್ವಾಣಿ ಗಾಯಗೊಂಡವರು. ಘಟನೆಯಲ್ಲಿ ಇಬ್ಬರಿಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ‌ದಾಖಲಿಸಲಾಗಿದೆ, ಇನ್ನುಳಿದವರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ರಾತ್ರಿ ಅಡುಗೆ ತಯಾರಿಸಿ ಊಟ ಮಾಡಿ ಲೈಟ್ ಆಫ್ ಮಾಡಿ ಮಲಗಿರುವ ಕುಟುಂಬ ಮಧ್ಯರಾತ್ರಿ ಗ್ಯಾಸ್ ಸೋರಿಕೆ ಆಗಿರೋ ವಾಸನೆ ಬಂದಿದೆ. ಹೀಗಾಗಿ ಅಡುಗೆ ಮನೆಯಲ್ಲಿ ಗ್ಯಾಸ್ ಇಟ್ಟಕ್ಕೆ ಜಾಗಕ್ಕೆ ತೆರಳಲು ಮೊಬೈಲ್ ಬ್ಯಾಟರಿ ಆನ್ ಮಾಡಿದ್ದಾರೆ ಗ್ಯಾಸ್ ಬಳಿ ಹೋದಾಗ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ.

Loading

Leave a Reply

Your email address will not be published. Required fields are marked *