ಭಾರೀ ಮಳೆಯಿಂದ ಭೂಕುಸಿತ: 3,500 ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಿದ ಸೇನೆ

ಗಂಗ್ತೊಕ್: ಉತ್ತರ ಸಿಕ್ಕಿಂನಲ್ಲಿ (Sikkim) ಭಾರೀ ಮಳೆಯಿಂದಾಗಿ‌ (Rain) ಉಂಟಾದ ಭೂಕುಸಿತದಿಂದ (Landslides) ತೊಂದರೆಗೆ ಸಿಲುಕಿದ್ದ 300ಕ್ಕೂ ಹೆಚ್ಚು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಚುಂಗ್‍ಥಾಂಗ್‍ನಲ್ಲಿ ಸಿಕ್ಕಿಬಿದ್ದ 300 ಪ್ರವಾಸಿಗರಿಗೆ ಸ್ಟ್ರೈಕಿಂಗ್ ಲಯನ್ ಡಿವಿಷನ್‍ನ ತ್ರಿಶಕ್ತಿ ಕಾರ್ಪ್ಸ್ (Trishakti Corps) ಪಡೆಗಳು ಗಂಗ್ತೊಕ್‍ಗೆ (Gangtok) ತೆರಳಲು ತಾತ್ಕಾಲಿಕ ಸೇತುವೆ (Temporary Bridge) ಮೂಲಕ ದಾಟಲು ಸಹಕರಿಸಿದೆ. ಅಲ್ಲದೇ ಪ್ರವಾಸಿಗರಿಗೆ ಸೇನೆಯಿಂದ ಆಹಾರ, ವೈದ್ಯಕೀಯ ಸೌಕರ್ಯಗಳನ್ನು ಒದಗಿಸಿ ವಿಶ್ರಾಂತಿಗೆ ಅವಕಾಶ ಮಾಡಿಕೊಡಲಾಗಿದೆ.

ಸಿಲುಕಿರುವ ಪ್ರವಾಸಿಗರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ. ಇದಲ್ಲದೆ ಸಂಕಷ್ಟದಲ್ಲಿ ಸಿಲುಕಿರುವ 3,500 ಪ್ರವಾಸಿಗರನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ ಪಡೆಗಳು ಸಿಕ್ಕಿಂ ಸರ್ಕಾರಕ್ಕೆ ಸಹಾಯ ಮಾಡುತ್ತಿದೆ. ಈಗ ಸದ್ಯದ ಪರಿಸ್ಥಿತಿಯಲ್ಲಿ ಭೂಕುಸಿತದಿಂದಾಗಿ ವ್ಯಾಪಕವಾಗಿ ಹಾನಿಗೀಡಾದ ರಸ್ತೆಗಳು ಹಾಗೂ ಮಳೆ ಕಡಿಮೆ ಆಗುವ ವರೆಗೂ ಜಿಲ್ಲೆಗೆ ಯಾವ ಪ್ರವಾಸಿಗರಿಗೂ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಭಾರೀ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆಗಳನ್ನು ಸರಿ ಪಡಿಸಿದ ನಂತರ ಪ್ರವಾಸಿಗರಿಗೆ ಬರಲು ಅವಕಾಶ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ.

Loading

Leave a Reply

Your email address will not be published. Required fields are marked *