ಕೇದಾರನಾಥ ಮಾರ್ಗದಲ್ಲಿ ಭೂಕುಸಿತ: 10-12 ಮಂದಿ ಸಮಾಧಿ

ಡೆಹ್ರಾಡೂನ್: ಉತ್ತರಾಖಂಡದ ಗೌರಿಕುಂಡ್ನ ಕೇದಾರನಾಥ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಹಲವು ಜನ ಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಭೂಕುಸಿತದಲ್ಲ  ಸಿಲುಕಿದ್ದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೌರಿಕುಂಡ್ ಪೋಸ್ಟ್ ಸೇತುವೆ ಬಳಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಈ ಅವಘಡ ಸಂಭವಿಸಿದೆ. ದೊಡ್ಡ ಭೂಕುಸಿತದಿಂದಾಗಿ ಅವಶೇಷಗಳಲ್ಲಿ 10-12 ಮಂದಿ ಹೂತುಹೋಗಿದ್ದಾರೆ ಎನ್ನಲಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.
ಭೂಕುಸಿತ ಸಂಭವಿಸಿದ ತಕ್ಷಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸುಮಾರು 10-12 ಜನರು ಅಲ್ಲಿದ್ದರು ಎಂದು ಹೇಳಲಾಗಿದೆ. ಆದರೆ ಇಲ್ಲಿಯವರೆಗೆ ಒಬ್ಬರು ಪತ್ತೆಯಾಗಿಲ್ಲ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ದಲೀಪ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ. ನಾಪತ್ತೆಯಾದವರನ್ನು ವಿನೋದ್ (26), ಮುಲಾಯಂ (25), ಆಶು (23), ಪ್ರಿಯಾಂಶು ಚಮೋಲಾ (18), ರಣಬೀರ್ ಸಿಂಗ್ (28), ಅಮರ್ ಬೋಹ್ರಾ, ಅನಿತಾ ಬೊಹ್ರಾ, ರಾಧಿಕಾ ಬೋಹ್ರಾ ಮತ್ತು ಪಿಂಕಿ ಬೊಹ್ರಾ, ಪೃಥ್ವಿ ಬೋಹ್ರಾ (7), ಜತಿಲ್ (6) ಮತ್ತು ವಕೀಲ್ (3) ಎಂದು ಗುರುತಿಸಲಾಗಿದೆ.

Loading

Leave a Reply

Your email address will not be published. Required fields are marked *