ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಡಿ.ಕೆ.ಶಿವಕುಮಾರ್ ಬಹಳ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬಹಳ ಸಂತೋಷ ಅವರ ಆಶೀರ್ವಾದ ಮಾರ್ಗದರ್ಶನ ನಮಗೆ ಬಹಳ ಬಹಳ ಮುಖ್ಯ.ಮಾಯಾನೋ ಮಾಟಾನೋ ಜ್ಯೋತಿಷ್ಯನೋ, ಧರ್ಮಾನೋ ಶ್ರಮಾನೋ, ಫಲ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ ಎಂದು ಕುಟುಕಿದರು.
ಶ್ರಮ ಪಟ್ಟು 3 ವರ್ಷ ಸರಿಯಾಗಿ ನಿದ್ರೆ ಮಾಡಲಿಲ್ಲ ಊಟ ಮಾಡಲಿಲ್ಲ.ನಮ್ಮ ಕಾರ್ಯಕರ್ತರನ್ನ ಸರಿಯಾಗಿ ಮಲಗೋಕೆ ಬಿಡಲಿಲ್ಲ ಜನರು ವಿಶ್ವಾಸ ಇಟ್ಟು ನಂಬಿಕೆ ಇಟ್ಟು ಓಟ್ ಹಾಕಿದ್ದಾರೆ ಅಧಿಕಾರ ಕೊಟ್ಟಿದ್ದಾರೆ ಅವರ ಋಣ ತೀರಿಸಬೇಕು ಹಾಗಾಗಿ ನಾವೀಗ ತೀರಿಸುತ್ತಿದ್ದೇವೆ ಅಷ್ಟೇ ಯಾರೇನೇ ಮಾತನಾಡಿದರೂ ನಮ್ಮ ಕೆಲಸ ನಮಗೆ ಗೊತ್ತು ಯಾರಿಂದಲೂ ತಿಳಿಯೋದು ಬೇಕಾಗಿಲ್ಲವೆಂದು ಹೇಳಿದರು.
ಇನ್ನೂ ಕುಮಾರಸ್ವಾಮಿಯವರು ಏನೋ ಮಾತಾಡಲಿ ಬಿಡಿ ಅವರದೆ ಆದ ಅನುಭವ ಇದೆಯಲ್ಲ ಮಾತಾನಾಡ್ತಾ ಇರಬೇಕು. ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡುವ ಮೂಲಕ ಕಿಡಿಕಾರಿದರು.