ಬೆಂಗಳೂರು: ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರದ್ದು ಉತ್ತರನ ಪೌರುಷ. ಸೋನಿಯಾ ನಮ್ಮ ತಾಯಿ, ಪ್ರಿಯಾಂಕಾ ನನ್ನ ಸಹೋದರಿ ಎಂದರು. ಒಂದು ಬಾರಿ ಅಧಿಕಾರ ಕೊಡಿ ಎಂದಿದ್ದರು. ಆದರೆ ನೀವು ಸಿಎಂ ಆದ್ರಾ?ಎರಡೂವರೆ ವರ್ಷದ ಬಳಿಕ ಸಿಎಂ ಅಂತಾ ಹೇಳುವ ತಾಕತ್ತು ಇಲ್ವಾ?
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇರುವ ಎದೆಗಾರಿಕೆ ನಿಮಗೆ ಇಲ್ವಲ್ಲಾ. ಉತ್ತರನ ಪೌರುಷ ನಿಮ್ಮದು ಅಂತ ಜನ ಮಾತನಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಯಾರು ತೆಗೆದರು ಅಂತ ಕುಮಾರಸ್ವಾಮಿಗೆ ಗೊತ್ತಿದೆ. ಈಗ ರಾಜ್ಯದ ಜನರಿಗೆ ಸತ್ಯ ಹೇಳಬೇಕು ಎಂದು ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ಮಾಡಿದರು.