ಬೆಂಗಳೂರು;- ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ನೋಡಲು ಸಿಎಂ, ಡಿಸಿಎಂ ಹೋಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರಿಗೆ ಡಿಸಿಎಂ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ”ಕುಮಾರಸ್ವಾಮಿಗೆ ಈ ದೇಶದ ಆಸ್ತಿ ಏನೆಂಬುದರ ಬಗ್ಗೆ ಅರಿವಿಲ್ಲ. ಜನರ ಬದುಕು ನಮ್ಮ ಸಂಸ್ಕೃತಿಯಲ್ಲಿ ಏನೆಲ್ಲ ಇದೆ. ದೇಶದಲ್ಲಿ ದೇವಾಲಯ, ಚರ್ಚ್, ಚಿತ್ರಕಲೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳು ಇವೆ. ಕುಮಾರಸ್ವಾಮಿ ತಯಾರು ಮಾಡುವ ಸಿನಿಮಾ, ಅವರ ಮಗ ಆಯಕ್ಟ್ ಮಾಡುವ ಸಿನಿಮಾಗಳೂ ಇವೆ. ಹೀಗೆ ಎಲ್ಲದಕ್ಕೂ ಪ್ರೋತ್ಸಾಹ ನೀಡಬೇಕಲ್ಲ” ಎಂದು ಹೇಳಿದರು.
”ಇಡೀ ಪ್ರಪಂಚವೇ ಕ್ರೀಡೆಗಾಗಿ ಎಷ್ಟೊಂದು ಹೋರಾಟ ಮಾಡುತ್ತಿದೆ. ನಮಗೆ ಅದರ ರುಚಿ ಗೊತ್ತಿದೆ. ಕುಮಾರಸ್ವಾಮಿಗೆ ಆ ರುಚಿ ಗೊತ್ತಿಲ್ಲದೇ ಇರಬಹುದು. ಎಷ್ಟು ರಾಜಕಾರಣಿಗಳು, ಸಿಎಂಗಳು ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿಲ್ಲಾ?” ಎಂದು ಹೆಚ್ಡಿಕೆಗೆ ಡಿ ಕೆ ಶಿವಕುಮಾರ್ ಪ್ರಶ್ನೆ ಮಾಡಿದರು.