ಮಂಡ್ಯ: ಕಳೆದ 3 ದಿನಗಳ ಹಿಂದೆ ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ 34 ದಿನಗಳ ಬಳಿಕ ಕೆಆರ್ಎಸ್ ಡ್ಯಾಂನ (KRS Dam) ನೀರಿನ ಮಟ್ಟ 100 ಅಡಿಗಳ ಗಡಿ ದಾಟಿದೆ. ಈ ಮೂಲಕ ಆತಂಕ ಮೂಡಿದ ರೈತರಿಗೆ ಸ್ವಲ್ಪ ಪ್ರಮಾಣದ ಸಮಾಧಾನ ತಂದಿದೆ.ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಪರಿಮಾಣ ಕೆಆರ್ಎಸ್ ನೀರಿನ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿತ್ತು.
ಕಳೆದ ಸೆಪ್ಟೆಂಬರ್ 1 ರಿಂದ 100 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ಡ್ಯಾಂನ ನೀರಿನ ಮಟ್ಟ ಇತ್ತು. ಇದೀಗ ಕಳೆದ 3 ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ ಇಂದು 100.36 ಅಡಿಗೆ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿದೆ. ಮಳೆ ಬಿದ್ದ ಹಿನ್ನೆಲೆ ಕೆಆರ್ಎಸ್ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಇದರಿಂದ ಡ್ಯಾಂ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ತಮಿಳುನಾಡು ನೀರಿನ ಕ್ಯಾತೆಯ ನಡುವೆ ಕೆಆರ್ಎಸ್ 100 ಅಡಿ ಭರ್ತಿಯಾಗಿರೋದು ಸಮಾಧಾನಕರ ಸಂಗತಿಯಾಗಿದೆ.