ತುಮಕೂರು;- ಜಿಲ್ಲೆಯ ಬಂಡಿಮನೆ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ನಿನ್ನೆ ರಾತ್ರಿ ರೌಡಿಶೀಟರ್ ಮಾರುತಿ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಮಾರುತಿ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ನಿವಾಸಿ. ತುಮಕೂರು ತಾಲ್ಲೂಕಿನ ಮಂಚಕಲ್‌ಕುಪ್ಪೆ ಬಳಿ ವಾಸವಿದ್ದರು. ಐದು ಜನ ಸ್ನೇಹಿತರು ಯಾವುದೋ ಒಂದು ವಿಷಯದ ಕುರಿತು ಮಾತನಾಡಬೇಕು ಎಂದು ಮಾರುತಿಯನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಂದು ದಾಳಿ ಮಾಡಿದ್ದಾರೆ. ಮಾರುತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.