ಕಿವಿ ನೋವಾ..? ಹಾಗಾದ್ರೆ ಇಲ್ಲಿದೆ ನೋಡಿ ಮನೆ ಮದ್ದು..!

ದೇಹದ ಅಂಗಗಳನ್ನು ಜೋಪಾನ ಮಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿ. ಒಂದು ಬಾರಿ ಅಂಗ ಊನವಾದರೆ ಮತ್ತೆಂದೂ ಮೊದಲಿನಂತಾಗದು. ಕೆಲವೊಂದು ಸೂಕ್ಷ್ಮ ಅಂಗಗಳನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಅಂತಹ ಅಂಗಗಳಲ್ಲಿ ಕಿವಿ ಕೂಡ ಒಂದು.

ಸಾಮಾನ್ಯವಾಗಿ ಕಿವಿಗೆ ನೋವು ಬರುವುದು ಕುಗ್ಗೆ ಕಟ್ಟಿದಾಗ, ಕಿವಿಯ ಸೋಂಕು, ವಸಡಿನ ಸಮಸ್ಯೆ ಇದ್ದಾಗ, ಸೈನಸ್‌ ಇದ್ದಾಗಲೂ ಕಿವಿ ನೋವು ಬರುತ್ತದೆ.

ಅಂತಹ ಸಂದರ್ಭದಲ್ಲಿ ತಕ್ಷಣ ಆರೈಕೆ ಮಾಡಿಕೊಳ್ಳಬೇಕು. 2, 3 ದಿನವಾದರೂ ಗುಣವಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಾಗಾದರೆ ಕಿವಿ ನೋವು ಆರಂಭವಾದರೆ ಯಾವೆಲ್ಲಾ ಮನೆಮದ್ದು ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಬೆಳ್ಳುಳ್ಳಿ

ಕಿವಿ ನೋವಿಗೆ ಬೆಳ್ಳುಳ್ಳಿ ಅತ್ತುತ್ತಮ ಪರಿಹಾರವನ್ನು ನೀಡುತ್ತದೆ. ಉತ್ಕರ್ಷಣ ನಿರೋಧಿ ಅಂಶಗಳನ್ನು ಬೆಳ್ಳುಳ್ಳಿ ಹೊಂದಿದ್ದು ನೋವನ್ನು ಶಮನಮಾಡುವ ಗುಣ ಹೊಂದಿದೆ.

ಕಿವಿ ನೋವಿಗೆ ಬೆಳ್ಳುಳ್ಳಿಯನ್ನು ಬೇಯಿಸಿ ಚೆನ್ನಾಗಿ ಜಜ್ಜಿ ಚಿಟಿಕೆ ಉಪ್ಪು ಸೇರಿಸಿ ಅದನ್ನು ಒಂದು ಹತ್ತಿಯ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ನಂತರ ಅದನ್ನು ನೊಯುತ್ತಿರುವ ಕಿವಿಯ ಮೇಲೆ ಇಟ್ಟುಕೊಳ್ಳಿ. 3 ರಿಂದ 4 ಬೆಳ್ಳುಳ್ಳಿಯನ್ನು ಬಳಸಿದರೆ ಸಾಕಾಗುತ್ತದೆ.

ಸಾಸಿವೆ ಎಣ್ಣೆ

ಕಿವಿಯ ನೋವಿದ್ದರೆ ಆದಷ್ಟು ಕಿವಿಯನ್ನು ಬೆಚ್ಚಗೆ ಮಾಡಬೇಕು. ಅದಕ್ಕಾಗಿ ಉಗುರು ಬೆಚ್ಚಗಿನ ಸಾಸಿವೆ ಎಣ್ಣೆ ಒಳ್ಳೆಯದು. ಆಂಟಿ ಬ್ಯಾಕ್ಟೀರಿಯಲ್‌ ಗುಣ ಹೊಂದಿರುವ ಸಾಸಿವೆ ಎಣ್ಣೆ ಕಿವಿ ನೋವಿಗೆ ಪರಿಹಾರ ನೀಡುತ್ತದೆ.

ಸಾಸಿವೆ ಎಣ್ಣೆಯನ್ನು ಒಂದು ಬಾಟಲಿಗೆ ಹಾಕಿ ಕುದಿಯುತ್ತಿರುವ ನೀರಿನ ಪಾತ್ರೆಯೊಳಗಿಡಿ. ಆಗ ಬಾಟಲಿಯೊಳಗಿನ ಎಣ್ಣೆ ಬಿಸಿಯಾಗುತ್ತದೆ. ಅದನ್ನು 2 ಹನಿಗಳಷ್ಟು ಕಿವಿಗೆ ಬಿಡಿ.

ಶಾಖ ನೀಡಿ

ನೋವಿಗೆ ಬಿಸಿ ಶಾಖ ಹಿತವಾದ ಅನುಭವ ನೀಡುತ್ತದೆ. ಕಿವಿ ನೋವಿಗೂ ಅಷ್ಟೇ, ಒಂದು ಟವೆಲ್‌ನ್ನು ಬಿಸಿ ನೀರಿ ಅದ್ದಿ ಗಟ್ಟಿಯಾಗಿ ಹಿಂಡಿಕೊಳ್ಳಿ. ತುಸು ಬಿಸಿ ಇರುವ ಬಟ್ಟೆಯನ್ನು ನೋವಿರುವ ಕಿವಿಯ ಭಾಗದಲ್ಲಿಡಿ. ಅಥವಾ ನೀವು ಮಾರುಕಟ್ಟೆಯಲ್ಲಿ ಸಿಗುವ ಕಾಂಪ್ರೆಸ್‌ಗಳನ್ನೂ ತಂದು ಬಳಕೆ ಮಾಡಬಹುದು.

20 ನಿಮಿಷಗಳ ಇದನ್ನು ಮುಂದುವರೆಸಿ. ನೋವು ಕ್ರಮೇಣ ಕಡಿಮೆಯಾಗುತ್ತದೆ. ನೋವು ಕಡಿಮೆಯಾಗದೇ ಇದ್ದರೆ ಅದು ಇತರ ರೋಗಗಳ ಮುನ್ಸೂಚನೆ ಇರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ವೈದ್ಯರನ್ನು ಅವಶ್ಯವಾಗಿ ಸಂಪರ್ಕಿಸಿ.

​ಈರುಳ್ಳಿ ರಸ

ಸೈನಸ್‌ ಅಥವಾ ಶೀತದಿಂದ ಕಿವಿ ನೋವು ಬರುತ್ತದೆ. ಅಂತಹ ಸಂದರ್ಭದಲ್ಲಿ ಕಿವಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಮದ್ದು ಮಾಡುವಾಗಲೂ ಅಷ್ಟೇ ಎಚ್ಚರಿಕೆಯಿಂದ ಮಾಡಬೇಕು.

ಈರುಳ್ಳಿಯನ್ನು ಮಿಕ್ಸಿ ಮಾಡಿ ಅದರ ರಸವನ್ನು ತೆಗೆದುಕೊಳ್ಳಿ. ಹತ್ತಿಯ ಉಂಡೆಯನ್ನು ಅದರಲ್ಲಿ ಅದ್ದಿ ಕಿವಿಯ ಕೆಳಭಾಗದಲ್ಲಿ ಇರಿಸಿಕೊಳ್ಳಿ. ನೆನಪಿಡಿ ಯಾವುದೇ ಕಾರಣಕ್ಕೂ ಕಿವಿಯ ಒಳಗೆ ಈರುಳ್ಳಿ ರಸ ಹೋಗದಂತೆ ನೋಡಿಕೊಳ್ಳಿ.

ಬಿಸಿ ಪಾನೀಯಗಳನ್ನು ಸೇವಿಸಿ

ಕಿವಿ ನೋವನ್ನು ಶಮನ ಮಾಡಲು ಇದು ಅತ್ಯುತ್ತಮ ಮನೆಮದ್ದಾಗಿದೆ. ಶೀತದಿಂದ ಕಿವಿ ನೋವು ಉಂಟಾಗಿದ್ದರೆ ನೀವು ಹರ್ಬಲ್‌ ಟೀಗಳನ್ನು ತಯಾರಿಸಿ ಸೇವನೆ ಮಾಡಬಹುದು. ಶುಂಠಿ ಟೀ, ಲೆಮನ್‌ ಟೀ ಅಥವಾ ಗ್ರೀನ್‌ ಟೀನಂತಹ ಪಾನೀಯಗಳನ್ನು ಸೇವಿಸಿ.

ಅಥವಾ ಬಿಸಿ ನೀರಿಗೆ ಚಿಟಿಕೆಅರಿಶಿನ, ಸಕ್ಕರೆ ಸೇರಿಸಿ ಕೂಡ ಸೇವನೆ ಮಾಡಬಹುದು. ಇದರಿಂದ ಕಿವಿ ಸೇರಿ ದೇಹವೂ ಬೆಚ್ಚಗಾಗುತ್ತದೆ. ನೋವು ಕೂಡ ನಿಯಂತ್ರಣಕ್ಕೆ ಬರುತ್ತದೆ.

Loading

Leave a Reply

Your email address will not be published. Required fields are marked *