ಬೆಂಗಳೂರು;- ಕಿಲ್ಲರ್ ಬಿಎಂಟಿಸಿಗೆ ವ್ಯಕ್ತಿ ಬಲಿ ಕೇಸ್ ಗೆ ಸಂಬಂಧಿಸಿದಂತೆ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ. ಭರತ ರೆಡ್ಡಿ B 24 ವರ್ಷ ಮೃತ ದುರ್ದೈವಿ ಆಗಿದ್ದು, ಯಲಹಂಕ ಡಿ ಮಾರ್ಟ್ ಬಳಿ ನಿನ್ನೆ ಘಟನೆ ಜರುಗಿದೆ. ಸುಜಕಿ ಆಕ್ಸಿಸ್ ಸ್ಕೂಟರ್ No KA04JH0203 ವಾಹನವನದಲ್ಲಿ ಹೋಗುತ್ತಿದ್ದಾಗ ಹಿಂಬಂದಿಯಿಂದ ಬಿಎಂಟಿಸ್ ಬಸ್ ಡಿಕ್ಕಿ ಹೊಡೆದಿದೆ. ಅತಿವೇಗ ಹಾಗೂ ಅಜಾಗರುಕತೆ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂದ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಸಂಚಾರಿ ಪೊಲೀಸರಿಂದ ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.