ಬೆಂಗಳೂರು;-ಗುತ್ತಿಗೆದಾರ ಚಂದ್ರು ಎಂಬುವರನ್ನು ಅಪಹರಿಸಿ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟು ನಂತರ ಚೆಕ್ ಪಡೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವೆಂಕ ಟೇಶ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ವೆಂಕಟೇಶ್ ಅವರ ವಾರ್ಡ್ ವ್ಯಾಪ್ತಿಯಲ್ಲಿ ಚಂದ್ರು ಅವರು ಗುತ್ತಿಗೆ ಪಡೆದು ಕಾಮಗಾರಿ ಮಾಡಿಸಿದ್ದರು. ನಮ್ಮ ವ್ಯಾಪ್ತಿಯಲ್ಲಿ ಹೇಗೆ ಕಂಟ್ರಾಕ್ಟ ಮಾಡುತ್ತೀಯಾ ಎಂದು ಚಂದ್ರು ಅವರನ್ನು ಅಪಹರಿಸಿ, ಬೆದರಿಕೆವೊಡ್ಡಿ ಮೂರು ಕೋಟಿ ರೂ. ಚೆಕ್ ಪಡೆದು ನಂತರ ಬಿಡುಗಡೆ ಮಾಡಿದ್ದರು.
ಈ ಸಂಬಂಧ ಸಿಸಿಬಿ ಪೊಲೀಸರಿಗೆ ಗುತ್ತಿಗೆದಾರ ಚಂದ್ರು ದೂರು ನೀಡಿದ್ದಾರೆ. ಇದರನ್ವಯ ಸಿಸಿಬಿ ಪೊಲೀಸರು ಇದೀಗ ವೆಂಕಟೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದು, ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.