ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಜ್ಯೋತಿಷಿ ಮಗನ ತಲೆಗೆ ಗನ್ ಇಟ್ಟು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ HSR ಲೇಔಟ್ ಬಳಿ ಆಗಸ್ಟ್ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆದರೀಗ ಕಿಡ್ನಾಪ್ ಪ್ರಕರಣವನ್ನು ಹೆಚ್ಎಸ್ ಆರ್ ಲೇಔಟ್ ಪೊಲೀಸರು ಭೇದಿಸಿದ್ದು, ಅರ್ಜುನ್ (19) ಎಂಬಾತನನ್ನು ಬಂಧಿಸಿದ್ದಾರೆ.
ತುಮಕೂರು ಮೂಲದ ಅರ್ಜುನ್ ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದು ಪಿಜಿಯಲ್ಲಿ ವಾಸಿಸುತ್ತಿದ್ದ. ಸಾಧನೆ ಮಾಡಬೇಕೆಂದು ಅಂದುಕೊಂಡಿದ್ದವನು ಆದರೆ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಿನಿಮಾ ನೋಡುತಿದ್ದ ಅರ್ಜುನ್ನಿಂದ ಜ್ಯೋತಿಷಿ ಪುತ್ರನನ್ನು ಕಿಡ್ನಾಪ್ ಮಾಡುವ ಖತರ್ನಾಕ ಯೋಚನೆ ಬಂದಿದೆ.
ಜ್ಯೋತಿಷಿ ಮಗ ಮೆಡಿಕಲ್ ಸೀಟ್ಗಾಗಿ ಕೋಚಿಂಗ್ಗೆ ತೆರಳುತ್ತಿದ್ದ. ತಮ್ಮದೇ ಕಾರ್ನಲ್ಲಿ ಕೋಚಿಂಗ್ ತೆರಳುತ್ತಿದ್ದು, ಡ್ರಾಪ್ ಕೇಳುವ ನೆಪದಲ್ಲಿ, ಗನ್ ಹಣೆಗಿಟ್ಟು ಗಾಡಿ ಹೇಳಿದ ಕಡೆ ಹೊಗುವಂತೆ ಸೂಚಿಸಿ ಕಿಡ್ನಾಪ್ ಮಾಡಲಾಗಿದೆ. ಬಳಿಕ ಜ್ಯೋತಿಷಿ ಹಾಗೂ ಅವರ ಪತ್ನಿಗೆ ವಾಟ್ಸ್ ಆಯಪ್ ವಿಡಿಯೋ ಕಾಲ್ ಮಾಡಿ, 5 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾನೆ.
ಮಗ ಕಿಡ್ನಾಪ್ ಆದ ಬಗ್ಗೆ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗಾಗಿ ಕಾರ್ಯಾಚರಣೆಗಿಳಿದ ಪೊಲೀಸರಿಂದ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಬಳಿಕ ಆತ ಹೆದರಿಸಲು ಬಳಸಿದ ಗನ್ ಡಮ್ಮಿ ಎನ್ನುವುದು ಪತ್ತೆ ಆಗಿದೆ.
ಸಿನಿಮಾಗಳಲ್ಲಿ ಬಳಸುವ ಮಾದರಿಯ ಗನ್ ಆರ್ಡರ್ ಕೊಟ್ಟು ಮಾಡಿಸಿಕೊಂಡಿದ್ದ. 38 ಸಾವಿರ ರೂ. ಕೊಟ್ಟು ಡಮ್ಮಿ ಗನ್ ಖರೀದಿ ಮಾಡಿದ್ದ. ಬಳಿಕ ಜ್ಯೋತಿಷಿ ನಿವಾಸದ ಬಳಿ ಒಂದು ತಿಂಗಳ ವಾಚ್ ಮಾಡಿದ್ದ.