ಬೆಂಗಳೂರು : ಮನೆಯ ಹೊರಗೆ ಆಟವಾಡುತ್ತಿದ್ದ ನಾಯಿಮರಿಯನ್ನು ಇಬ್ಬರು ಕಳ್ಳರು ಹೊತ್ತೊಯ್ದಿರುವ ಘಟನೆ ಬೆಂಗಳೂರಿನ ಗಿರಿನಗರ ವ್ಯಾಪ್ತಿಯಲ್ಲಿ ನಡೆದಿದೆ. ಸುಮತಿ ಎಂಬುವವರು ಸಾಕಿದ್ದ ಡೈಸಿ ಹೆಸರಿನ ನಾಯಿಮರಿಯಾಗಿದ್ದು, ಸ್ಕೂಟಿಯಲ್ಲಿ ಬಂದು ನಾಯಿಯನ್ನ ಖದೀಮರು ಕದ್ದಿದ್ದಾರೆ. 10 ತಿಂಗಳ ಡೈಸಿ ಎಂಬ ಹೆಸರಿನ ನಾಯಿಮರಿ ಕಳ್ಳತನವಾಗಿದೆ. ಇನ್ನೂ ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. 1 ತಿಂಗಳ ಮರಿ ಇದ್ದಾಗ ಸುಮತಿ ತಂದು ಸಾಕಿದ್ದರು. ಸದ್ಯ ನಾಯಿ ಮರಿ ಕಳ್ಳತನವಾಗಿದೆ ಎಂದು ಸುಮತಿ ದೂರು ದಾಖಲಿಸಿದ್ದಾಳೆ. ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.