ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್‍ನನ್ನು ಬಂಧಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಅಂದರೆ ಕಳೆದ 12 ದಿನಗಳಿಂದ ಆರ್‌ಡಿ ಪಾಟೀಲ್ ತಲೆ ಮರೆಸಿಕೊಂಡಿದ್ದನು. ತೀವ್ರ ಹುಡುಕಾಟದ ನಂತರ ಇಂದು ಪಾಟೀಲ್‌ನನ್ನು ಅರೆಸ್ಟ್ ಮಾಡಲಾಗಿದೆ. ತಲಮರೆಸಿಕೊಂಡಿದ್ದ ಆರ್ ಡಿ ಪಾಟೀಲ್ ಸಂಬಮಧಿಕರ ಮನೆಯಲ್ಲಿಯೇ ಅವಿತುಕೊಂಡಿದ್ದ. ಇಂದು ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಅಫಜಲಪುರದಲ್ಲಿರುವ ಸಂಬಂಧಿಕರ ಮನೆಯಿಂದಲೇ ಆರ್‍ಡಿ ಪಾಟೀಲ್‍ನನ್ನು ಪೊಲೀಸರು ಬಂಧನ ಮಾಡಿದ್ದಾರೆ.