ಕಲಬುರ್ಗಿ:- KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆಯನ್ನ ಇದೀಗ CID ಶುರುಮಾಡಿರುವುದು ಎಲ್ಲರಿಗೂ ತಿಳಿಯ ವಿಷಯ. ಬೆಂಗಳೂರಿನಿಂದ ಅಧಿಕಾರಿಯೊಬ್ಬರು ತನಿಖೆಗಾಗಿ ಕಲಬುರಗಿಗೆ ಆಗಮಿಸಿದ್ದು ಮೊದಲು ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ಕೇಸನ್ನ ಕೈಗೆತ್ತಿಕೊಂಡಿದ್ದಾರೆ. ಸರ್ಕಾರದ ಆದೇಶದ ಬಳಿಕ ಎಲ್ಲ ದಾಖಲೆಗಳನ್ನ ಸ್ಥಳೀಯ ಪೋಲೀಸರು CID ಗೆ ಹಸ್ತಾಂತರ ಮಾಡಿದ್ದಾರೆ..
ಈ ಹಿಂದೆ ನಡೆದ ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದ ಕಲಬುರಗಿಯ CID ಅಧಿಕಾರಿಯೊಬ್ರು ಬೆಂಗಳೂರಿನ ತನಿಖಾಧಿಕಾರಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಹೀಗಾಗಿ ತನಿಖೆ ಮತ್ತಷ್ಟು ವೇಗ ಪಡೆಯಲಿದೆ..