ನಟಿ ರಶ್ಮಿಕಾ ಬಳಿಕ ತೆಲುಗು ಚಿತ್ರರಂಗದಲ್ಲಿ ಮತ್ತೊಬ್ಬ ಕನ್ನಡತಿಯ ಹವಾ ಶುರುವಾಗಿದೆ. ಸದ್ಯ ನಟಿ ಶ್ರೀಲೀಲಾಗೆ ಟಾಲಿವುಡ್ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಶುರುವಾಗಿದ್ದು ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ.
‘ಲೈಗರ್’ ಸೋಲಿನ ನಂತರ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ‘ಜೆರ್ಸಿ’ ಚಿತ್ರದ ನಿರ್ದೇಶಕ ಗೌತಮ್, ವಿಜಯ್ ದೇವರಕೊಂಡ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ವಿಭಿನ್ನ ಪಾತ್ರದ ಮೂಲಕ ಮನಗೆಲ್ಲಲ್ಲು ವಿಜಯ್ ಸಜ್ಜಾಗಿದ್ದಾರೆ.
ವಿಜಯ್ ಗೆ ಜೋಡಿಯಾಗಿ ನಟಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದು ಈ ಸಿನಿಮಾದ ಮುಹೂರ್ತ ಪೂಜೆಯನ್ನ ಮೇ ೩ರಂದು ಹೈದರಾಬಾದ್ ಸರಳವಾಗಿ ನಡೆದಿದೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದು ವಿಜಯ್ ನಟನೆಯ 12ನೇ ಚಿತ್ರವಾಗಿದ್ದು ಮುಹೂರ್ತ ಸಮಾರಂಭದಲ್ಲಿ ವಿಜಯ್, ಶ್ರೀಲೀಲಾ, ನಿರ್ದೇಶಕ ಗೌತಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದೇ ಜೂನ್ ನಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.