ಪರಭಾಷಾ ಬಿಗ್ ಬಾಸ್ (Bigg Boss Telugu) ಶೋನಲ್ಲಿ ಭಾಗಿಯಾಗಿ, ಸಖತ್ ಸದ್ದು ಮಾಡಿದ್ದ ಕನ್ನಡತಿ ಶೋಭಾ ಶೆಟ್ಟಿ ಈ ವಾರ ಎಲಿಮಿನೇಟ್ (Eliminated) ಆಗಿದ್ದಾರೆ. ಈ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ಶೋಭಾ ಶೆಟ್ಟಿ ಇರಲಿದ್ದಾರೆ ಎಂದೇ ನಂಬಲಾಗಿತ್ತು.
ಆದರೆ, ಆ ನಂಬಿಕೆ ಇದೀಗ ಸುಳ್ಳಾಗಿದೆ.
‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದರು. ನಾಗಾರ್ಜುನ (Nagarjuna) ನಿರೂಪಣೆಯ ಬಿಗ್ ಬಾಸ್ನಲ್ಲಿ ಶೋಭಾ ಶೆಟ್ಟಿ ಕಮಾಲ್ ಮಾಡ್ತಿದ್ದರು. ಕನ್ನಡದ ನಟಿಯ ಆಟ ನೋಡಿ, ಇವ್ರು ಕನ್ನಡದ ಬಿಗ್ ಬಾಸ್ ಸೀಸನ್ 10ನಲ್ಲಿ ಇರಬಾರದಿತ್ತಾ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದರು.
ತೆಲುಗು ಬಿಗ್ ಬಾಸ್ ಸೀಸನ್-7ರಲ್ಲಿ ಬೆಂಗಳೂರಿನ ಈ ಬೆಡಗಿ ದೊಡ್ಮನೆಯಲ್ಲಿ ರೆಬೆಲ್ ಆಗಿ ಆಟ ಆಡುತ್ತಿದ್ದರು. ಅವರ ಆಟಕ್ಕೆ ಮನೆ ಮಂದಿ ಗಪ್ ಚುಪ್ ಆಗಿದ್ದರು. ಶೋಭಾ ಖಡಕ್ ಆಟ ನೋಡಿ, ಅಯ್ಯೋ ಇವರು ಕನ್ನಡದ ಬಿಗ್ ಬಾಸ್ ಶೋನಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು ಈ ಕುರಿತು ಸಖತ್ ಟ್ರೋಲ್ (Troll) ಕೂಡ ಆಗಿದ್ದರು. ಈಗ ಏಕಾಏಕಿ ಮನೆಯಿಂದ ಆಚೆ ಬಂದಿದ್ದಾರೆ.
ಎದುರಾಳಿಯ ಮಾತಿಗೆ ಕೌಂಟರ್ ಕೊಡೋ ಶೋಭಾ ಆಟಕ್ಕೆ ನೋಡಿ, ಪ್ರೇಕ್ಷಕರು ಭೇಷ್ ಎಂದಿದ್ದರು. ಕನ್ನಡದ ಶೋನಲ್ಲಿ ಶೋಭಾ ಇಲ್ಲ ಅಂತ ಬೇಸರ ಮಾಡಿಕೊಳ್ಳಬೇಡಿ. ಕನ್ನಡದಲ್ಲಿ ಸಂಗೀತಾ- ತನಿಷಾ ಮಾಸ್ ಆಗಿ ಆಟ ಆಡ್ತಿದ್ದಾರೆ. ಶೋಭಾರಂತಯೇ ಇಲ್ಲಿಯೂ ಕೂಡ ಠಕ್ಕರ್ ಕೊಡುವವರು ಇದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ಕನ್ನಡದಲ್ಲಿ ಸಂಗೀತಾ ಮನೆಯೊಳಗೆ ಉಳಿದಿದ್ದಾರೆ. ಆದರೆ, ಶೋಭಾ ಈ ವಾರ ಆಚೆ ಬಂದಿದ್ದಾರೆ.