ಬೆಂಗಳೂರು;- ಇಂದು ರಾಜ್ಯದ ದಿಕ್ಕು-ದಿಕ್ಕಿನಲ್ಲೂ ಕನ್ನಡ ಡಿಂಡಿಮ ಬಾರಿಸಲಿದೆ. ಕರ್ನಾಟಕ ಎಂದು ನಾಮಕರಣ ಮಾಡಿ ಬರೋಬ್ಬರಿ 50 ವರ್ಷ ಆಗಿದೆ. ಈ ವರ್ಷ ವಿನೂತನವಾಗಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಮನೆ-ಮನೆಗಳ ಮುಂದೆ ಕೆಂಪು-ಹಳದಿಯ ರಂಗೋಲಿ, ಎಲ್ಲ ಮನೆಗಳಲ್ಲೂ ನಾಡಗೀತೆ ಹಾಡಲು ಸಿದ್ದರಾಮಯ್ಯ ಸರ್ಕಾರ ಕರೆ ಕೊಟ್ಟಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿನೂತನ ಕಾರ್ಯಕ್ರಮ ನಡೆಯಲಿದೆ. ಅಪಾರ್ಟ್ಮೆಂಟ್, ಸ್ಕೂಲ್-ಕಾಲೇಜು, ಸರ್ಕಾರಿ ಕಚೇರಿಗಳಲ್ಲೂ ಕನ್ನಡದ ಕಂಪು ಪಸರಿಸಲಿದೆ.
ಸಿಎಂ ಸಿದ್ದರಾಮಯ್ಯನವರು ಕಂಠೀರವ ಸ್ಟೇಡಿಯಂನಲ್ಲಿ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಧ್ಯಾಹ್ನ ಕನ್ನಡ ತಾಯಿ ಭುವನೇಶ್ವರಿ ಉತ್ಸವ ನಡೆಯಲಿದೆ. ಬೆಂಗಳೂರು ಅಧಿದೇವತೆ ಅಣ್ಣಮ್ಮ ದೇವಿ ಮೆರವಣಿಗೆಗೆ ಸಿಎಂ ಚಾಲನೆ, ಸಂಜೆ 5.30ಕ್ಕೆ ವಿಧಾನಸೌಧ ಬಳಿ ಪೊಲೀಸ್ ಸಮೂಹ ವಾದ್ಯಮೇಳ ಮತ್ತು ರಾತ್ರಿ 7.30ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ