ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಮಧ್ಯೆ ಶ್ರೀಜಾ ಪತಿ ಕಲ್ಯಾಣ್ ದೇವ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಚಿರಂಜೀವಿ ಪುತ್ರಿ ಶ್ರೀಜಾ ಡಿವೋರ್ಸ್ ವಿಚಾರವಾಗಿ ಸಂಚಲನ ಮೂಡಿಸಿದ್ದಾರೆ.
ಶ್ರೀಜಾಗೆ ಈ ಹಿಂದೆಯೇ ತಂದೆಯನ್ನು ಎದುರು ಹಾಕಿಕೊಂಡ ಮದುವೆಯಾಗಿದ್ದರು. ಆ ಬಳಿಕ ಕುಟುಂಬದವರ ಸಮ್ಮತಿಯಂತೆ ಕಲ್ಯಾಣ್ ದೇವ್ ಜೊತೆ 2ನೇ ಮದುವೆಯಾಗಿದ್ದರು. ಇದೀಗ ಕಲ್ಯಾಣ್ ದೇವ್ ಜೊತೆಗಿನ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆ ಎನ್ನಲಾಗುತ್ತಿದೆ.
ಶ್ರೀಜಾ- ಕಲ್ಯಾಣ್ ಇಬ್ಬರೂ ದೂರಾಗುತ್ತಾರೆ ಎಂದು ಸುದ್ದಿ ಆಗುತ್ತಿದ್ದರೂ ಎರಡು ಫ್ಯಾಮಿಲಿಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು ಶ್ರೀಜಾ ತವರು ಮನೆಯಲ್ಲಿ ಇದ್ದಾರೆ. ಇನ್ನು ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಕಲ್ಯಾಣ್ ಇನ್‌ಸ್ಟಾ ಸ್ಟೋರಿ ಮತ್ತೊಮ್ಮೆ ಡಿವೋರ್ಸ್ ಬಗ್ಗೆ ಅನುಮಾನ ಹುಟ್ಟುಹಾಕಿದೆ.
ಮಕ್ಕಳು ಪೋಷಕರನ್ನು ನೋಡುತ್ತಿದ್ದಂತೆ ಎಕ್ಸೈಟ್ ಆಗುವ ಫೋಟೊವನ್ನು ಶೇರ್ ಮಾಡಿ ಕಲ್ಯಾಣ್ ದೇವ್ “ಮಕ್ಕಳಿಗೆ ತಂದೆ ತಾಯಿ ಪ್ರೀತಿ, ಬೆಂಬಲ ಬಹಳ ಮುಖ್ಯ, ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತ್ನಿಗೆ ಕಲ್ಯಾಣ್ ಟಾಂಗ್ ಕೊಟ್ಟಿದ್ದಾರೆ.