ಹಾವೇರಿ: ಹಾವೇರಿ ಜಿಲ್ಲೆ ಹಿರೇಕೆರೂರು(Haveri) ತಾಲ್ಲೂಕಿನಾದ್ಯಂತ ಮಳೆಯಾಗದೇ ಇದ್ದುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಪರಿಣಾಮ ರೈತ ಸಂಪರ್ಕ ಕೇಂದ್ರದಲ್ಲಿ(Farmer Contact Centre) ರೈತರ ಸುಳಿವೆ ಇಲ್ಲ.ತಾಲ್ಲೂಕಿನ ಜೀವನಾಡಿಯಾದ ಕುಮದ್ವತಿ ನದಿ ನೀರಿಲ್ಲದೆ ಒಣಗಿದೆ.
ಅಶ್ವಿನಿ, ಭರಣಿ, ಕೃತಿಕಾ ಮಳೆಗಳು ಕೈಕೊಟ್ಟಿವೆ.ತಿಂಗಳ ಅಂತ್ಯದಲ್ಲಿ ಮುಂಗಾರಿನ ಮುನ್ಸೂಚನೆ ನೀಡುತ್ತಿದ್ದ ಮೃಗಶಿರಾ ಮುನಿಸಿಕೊಂಡಿದೆ. ಇನ್ನೂ ತಿಂಗಳ ಕೊನೆವಾರದಲ್ಲಿ ಬರುವ ಅರಿದ್ರ ಮಳೆ ಭೂಮಿಯತ್ತ ಮುಖ ತೋರಿಸುವುದೇ ಎಂದು ರೈತರು ಚಿಂತೆಗೀಡಾಗಿದ್ದಾರೆ.
ವಿವಿಧ ಬೀಜಗಳನ್ನು ಬಿತ್ತೆನೆ ಮಾಡಿದ್ದರು. ಬರು ಬರುತ್ತಾ ಮಳೆಯ ಪ್ರಮಾಣ ಕಡಿಮೆಯಾಗಿ ಹಾಕಿದ ಬೀಜ ಮೇಲೇಳದೆ ಇರುವುದನ್ನು ನೋಡಿ ರೈತರು ಮರುಕುಪಡುವಂತಾಗಿದೆ.ಹಳ್ಳಿಗಳಲ್ಲಿ ಮಳೆಯಾಗಿಲ್ಲ, ಒಣ ಹವೆ ಮುಂದುವರಿದಿದೆ.ಹವಾಮಾನ ಇಲಾಖೆ ತೋರಿದ್ದಾರೆ. ಮುನ್ಸೂಚನೆಯಂತೆ ಜೂನ್ 11ರಂದು ಮುಂಗಾರು ಆರಂಭವಾಗಬೇಕಾಗಿತ್ತು. ಆದರೆ ಇನ್ನೂ ಮಳೆ ಬಂದಿಲ್ಲ. ಈ ವರ್ಷ ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆಯ ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ಬಂದಿವೆ. ಮುಂಗಾರು ಆರಂಭವಾದರೆ ಸಾಕು ಮುಗಿ ಬಿತ್ತನೆ ತೆಗೆದುಕೊಳ್ಳುತ್ತಿದ್ದ ರೈತರು ಈಗ ಅತ್ಯ ಮುಖ ಕೂಡ ಹಾಕುತ್ತಿಲ್ಲ.