ಇಸ್ರೋ ತಂಡವನ್ನು ಅಭಿನಂದಿಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಚಂದ್ರಯಾನ-3ರ (Chandrayaan-3) ಯಶಸ್ಸನ್ನು ಐತಿಹಾಸಿಕ ಸಾಧನೆ ಎಂದು ಶ್ಲಾಘಿಸಿದ್ದು, ಇಂತಹ ಅದ್ಭುತ ಸಾಧನೆ ಮಾಡಿದ್ದಕ್ಕಾಗಿ ಇಸ್ರೋ (ISRO) ತಂಡವನ್ನು ಅಭಿನಂದಿಸಿದ್ದಾರೆ.

ಚಂದ್ರನ ಮೇಲ್ಮೈ ಸಾಫ್ಟ್ ಲ್ಯಾಂಡಿಂಗ್ ಮಾಡಿ ಸಾಧನೆಗೈದ ರಾಷ್ಟ್ರಗಳ ಗುಂಪಿನಲ್ಲಿ ಭಾರತವನ್ನೂ ಸೇರಿಸುತ್ತದೆ. ನಮ್ಮ ಮಹಾನ್ ರಾಷ್ಟ್ರದ ಪ್ರಜೆಯಾಗಿ ನಾನು ಅಪಾರ ಹೆಮ್ಮೆಯಿಂದ ಇಂದು ಚಂದ್ರಯಾನ-3ರ ಗಮನಾರ್ಹ ಲ್ಯಾಂಡಿಂಗ್ ಅನ್ನು ನೋಡಿದೆ ಎಂದರು. ಇದು ಹೊಸ ಮಾರ್ಗಗಳು ಮತ್ತು ವೈಜ್ಞಾನಿಕ ಸಂಶೋಧನೆ ಮತ್ತು ಅನ್ವೇಷಣೆಗೆ ಸಹಾಯ ಮಾಡುತ್ತದೆ. ನಿಜವಾಗಿ ಈ ಲ್ಯಾಂಡಿಂಗ್ ನಮ್ಮ ರಾಷ್ಟ್ರದ ಮುಂದಿನ ಮೆರವಣಿಗೆಯಲ್ಲಿ ಒಂದು ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇವರು ಮಾತ್ರವಲ್ಲದೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) ಅವರು ಸಹಾ ಯೋಜನೆಯಲ್ಲಿ ತೊಡಗಿದ್ದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಡೀ ರಾಷ್ಟ್ರವೇ ಈ ಸಾಧನೆಗೆ ಹೆಮ್ಮೆ ಪಡುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಾಯಕತ್ವದಲ್ಲಿ ಭಾರತ ಈಗಾಗಲೇ ಎಲ್ಲಾದರಲ್ಲೂ ಮೊದಲ ಸ್ಥಾನದಲ್ಲಿದೆ. ಈ ಮಹಾನ್ ದೇಶ ಇದೀಗ ಮತ್ತೊಂದು ಸಾಧನೆಯನ್ನು ಮಾಡಿದೆ ಎಂದರು.

 

Loading

Leave a Reply

Your email address will not be published. Required fields are marked *