ವಿದ್ಯುತ್ ಬಿಲ್ ಕೇಳಿದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಕೊಪ್ಪಳ: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತ ಉಚಿತ ವಿದ್ಯುತ್ ಗ್ಯಾರಂಟಿ ಈಗ ಚರ್ಚೆಗೆ ಗ್ರಾಸವಾಗಿ, ಸಂಘರ್ಷಕ್ಕೆ ಕಾರಣವಾಗಿದೆ. ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಕಟ್ಟುವಂತೆ ಕೇಳಿದಂತ ಜೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ಮಾಡಿರುವಂತ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ಚಂದ್ರಶೇಖರ್ ಹಿರೇಮಠ ಎಂಬುವರು ಕಳೆದ 6 ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಬಾಕಿ ಉಳಿಸಿಕೊಂಡಿದ್ದಂತ ವಿದ್ಯುತ್ ಬಿಲ್ ನ ರೂ.9,990 ಕಟ್ಟುವಂತೆ ಜೆಸ್ಕಾಂ ಲೈನ್ ಮ್ಯಾನ್ ಮನವಿ ಮಾಡಿದ್ದಾರೆ.

ಈ ವೇಳೆ ಮಂಜುನಾಥ್ ಹಾಗೂ ಲೈನ್ ಮ್ಯಾನ್ ನಡುವೆ ವಾಗ್ವಾದ ನಡೆದಿದೆ. ಕಾಂಗ್ರೆಸ್ ಸರ್ಕಾರ ಬಂದರೇ ವಿದ್ಯುತ್ ಪ್ರೀ ಎಂಬುದಾಗಿ ಹೇಳಿತ್ತು. ಜಾರಿಗೆ ತರುವುದಾಗಿಯೂ ಘೋಷಣೆ ಮಾಡಿದೆ. ನಾನು ವಿದ್ಯುತ್ ಬಿಲ್ ಕಟ್ಟೋದಿಲ್ಲ ಎಂಬುದಾಗಿ ತಗಾದೆ ತೆಗೆದಿದ್ದಾರೆ.

ಮಾತಿಗೆ ಮಾತು ಬೆಳೆಗು ವಾಗ್ವಾದ ತಾರಕ್ಕೇರಿದಾಗ ಚಂದ್ರಶೇಖರ್ ಹಿರೇಮಠ್ ಜೆಸ್ಕಾಂ ಲೈನ್ ಮ್ಯಾನ್ ಗೆ ಚಪ್ಪಲಿಯಿಂದ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಲೈನ್ ಮ್ಯಾನ್ ಮುನಿರಾಬಾದ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ಬಂಧಿಸಿದ್ದಾರೆ.

Loading

Leave a Reply

Your email address will not be published. Required fields are marked *