ಬೆಂಗಳೂರು: ನಮ್ಮದೇ ಒರಿಜಿನಲ್ ಜೆಡಿಎಸ್, ಬಿಜೆಪಿಯೊಂದಿಗಿನ ಮೈತ್ರಿಗೆ ಬೆಂಬಲ ಇಲ್ಲ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ಫ್ರೀಡಂ ಪಾರ್ಕ್ ಬಳಿ ಮಾಜಿ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಪಾರ್ಟಿ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾರೊ ಹಳೆ ಶಾಸಕರನ್ನು ಇಟ್ಟಿಕೊಂಡು ನಿನ್ನೆ ಸಭೆ ಮಾಡಿದ್ದಾರೆ.
ಜೆಡಿಎಸ್ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ನಿನ್ನೆ ಯಾರಿದ್ರೂ, ಎಷ್ಟು ಜನ ಶಾಸಕರು, ಮುಖಂಡರು ಇದ್ರು ಅನ್ನೋದು ನಿಮಗೆ ಗೊತ್ತಿದೆ. ಜೆಡಿಎಸ್ ಅಂದ್ರೆ ದೇವೇಗೌಡರು, ದೇವೇಗೌಡರು ಅಂದ್ರೆ ಜೆಡಿಎಸ್. ಸಿಎಂ ಇಬ್ರಾಹಿಂ ಮಾತನ್ನ ಕೇಳುವವರು ಯಾರು? ಪ್ರಶ್ನಿಸಿದರು.