ಜೆಡಿಎಸ್ ಕೂಡ ಜನರ ಪರ ನಿಂತಿದೆ ಅಷ್ಟೆ ಇದು ಹೊಂದಾಣಿಕೆಯ ನಿಲುವಲ್ಲ: ಭಗವಂತ ಖೂಬಾ

ಬೆಂಗಳೂರು ;- ಕಾಂಗ್ರೆಸ್ ವಿರುದ್ಧದ ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸಿದ್ದರ ಹಿಂದೆ ಲೋಕಸಭೆ ಹೊಂದಾಣಿಕೆಯಿಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿ ವಿಚಾರದಲ್ಲಿ ಜೆಡಿಎಸ್ ನಿಲುವನ್ನು ಸ್ವಾಗತಿಸಿದ ಮಾತ್ರಕ್ಕೆ ಅದನ್ನು ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಕೋನದಿಂದ ನೋಡಬಾರದು, ಇದು ಮೈತ್ರಿಯ ಸುಳಿವಲ್ಲ, ನಾವು ಜನರ ಪರ ನಿಂತಿದ್ದೇವೆ, ಜೆಡಿಎಸ್ ಕೂಡ ಜನರ ಪರ ನಿಂತಿದೆ ಅಷ್ಟೆ ಇದು ಹೊಂದಾಣಿಕೆಯ ನಿಲುವಲ್ಲ ಎಂದರು.
ಗ್ಯಾರಂಟಿಗಳಿಗೆ ಷರತ್ತನ್ನು ಹಾಕಿ ಬಡವರಿಗೆ ಮಹಿಳೆಯರಿಗೆ ರೈತರಿಗೆ ಪದವೀಧರರಿಗೆ ಮದ್ಯಮ ವರ್ಗದವರಿಗೆ ಕೂಲಿ ಕಾರ್ಮಿಕರಿಗೆ ಎಲ್ಲರಿಗೂ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಇದನ್ನ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಹಾಗೂ ಕಟೀಲ್ ನೇತೃತ್ವದಲ್ಲಿ ಯಶಸ್ವಿಯಾಗಿ ಒಂದು ದಿನದ ಪ್ರತಿಭಟನಾ ಧರಣಿಯನ್ನ ನಡೆಸಿದ್ದೇವೆ. ಆ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹೇಳಿದರು.

Loading

Leave a Reply

Your email address will not be published. Required fields are marked *