ಬೆಂಗಳೂರು ಗ್ರಾಮಾಂತರ: ಇಂದು ಬೆಳ್ಳಂಬೆಳ್ಳೆಗ್ಗೆ ಜವರಾಯನ ಅಟ್ಟಹಾಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಫ್ಲೈ ಒವರ್ ಸರ್ವಿಸ್ ರಸ್ತೆಯ ನಡೆದಿದೆ .. ತಮಿಳುನಾಡು ಈರೋಡು ಮೂಲದ ಲಾರಿ ಚಾಲಕ ಉದಯ್ ಕುಮಾರ್ ಹಾಗೂ ಕ್ಲೀನರ್ ಕಾರ್ತಿಕೇಯನ್ ಮೃತಪಟ್ಟ ದುರ್ದೈವಿಗಳು
ಹೌದು ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಫ್ಲೇವರ್ ಸರ್ವೀಸ್ ರಸ್ತೆಯಲ್ಲಿ ಇಂದು ಬೆಳಗ್ಗೆ 6:30 ಸಮಯದಲ್ಲಿ ಬೆಂಗಳೂರಿನಿಂದ ಹೊಸೂರು ಕಡೆಗೆ ಹೋಗುವಾಗ ಲಾರಿ ಚಾಲಕ ಅತಿ ವೇಗವಾಗಿ ಹಾಲಿನ ಗಾಡಿ ಮಿಲ್ಕಿ ಮಸ್ತಿ ವಾಹನವನ್ನ ಓಡಿಸಿಕೊಂಡು ಬಂದಿದ್ದಾನೆ ಆದರೆ ಅತಿ ವೇಗವಾಗಿ ಚಲಿಸುತ್ತಿದ್ದ ಹಾಲಿನ ವಾಹನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಡಿಕ್ಕಿ ಹೊಡೆದಿದ್ದು ಪರಿಣಾಮ ಸುಮಾರು 200 ಮೀಟರ್ ನಷ್ಟು ಬ್ಯಾರಿಕೇಡ್ ಮೇಲೆ ಹರಿಸಿದ್ದಾನೆ.
ಇನ್ನೂ ಲಾರಿ ಚಾಲಕ ಉದಯ್ ಕುಮಾರ್ ಕ್ಲೀನರ್ ಕಾರ್ತಿಕೇಯನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಇನ್ನು ಕೂಡಲೆ ಮಾಹಿತಿ ಕಲೆ ಹಾಕಿದ ಪೊಲೀಸರು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂದಿ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು.. ಇನ್ನು ಅಗ್ನಿಶಾಮಕ ದಳದಿಂದ ಅಪಘಾತದಲ್ಲಿ ನಜ್ಜು ಗುಜ್ಜಾದ ಮೃತ ದೇಹಗಳನ್ನು ಹೊರತೆಗೆಲು ಹರ ಸಾಹಸ ಪಟ್ಟರು ಇನ್ನು ಇಲ್ಲಿನ ಹಾಲಿನ ಕಂಪನಿಯ ನೌಕರು ಮಾಹಿತಿ ಪ್ರಕಾರ ಮೂರು ದಿನದಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದ.
ಅದಲ್ಲದೆ ನೆನ್ನೆ ಅಷ್ಟೇ ಆಂಧ್ರಪ್ರದೇಶಕ್ಕೆ ಹೋಗಿ ಬಂದು ಮತ್ತೆ ಇಂದು ಲೋಡ್ ಗೆ ಬೆಂಗಳೂರಿಗೆ ಕೊಟ್ಟಿದ್ರಂತೆ ದೇಹಕ್ಕೆ ಆಯಸ್ ಮತ್ತು ನಿದ್ದೆ ಇಲ್ಲದ ಕಾರಣ ಕಂಪನಿಯ ದಿವ್ಯ ನಿರ್ಲಕ್ಷ್ಯ ಇಬ್ಬರ ಮೃತಪಟ್ಟಿರುವುದಾಗಿ ಆತನ ಜೊತೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಮಾಹಿತಿ ನೀಡಿದರು. ಇನ್ನು ಅತ್ತಿಬೆಲೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..