‘ಜೈಲರ್’ ಸಾಂಗ್​ ರಿಲೀಸ್: ತಮನ್ನಾ ಹಾಟ್​ನೆಸ್​ಗೆ ಫ್ಯಾನ್ಸ್​ ಫಿದಾ

ಮಿಲ್ಕಿ ಬ್ಯೂಟಿ ನಟಿ ತಮನ್ನಾ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಹಾಡಿಗೆ ಮೈ ಚಳಿ ಬಿಟ್ಟು ಕುಡಿದಿದ್ದು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಎರಡು ದಿನಗಳ ಹಿಂದಷ್ಟೇ ಜೈಲರ್ ಸಿನಿಮಾ ಹಾಡೊಂದು ರಿಲೀಸ್ ಆಗಿದ್ದು ತಮನ್ನಾ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

 

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇದೀಗ ಚಿತ್ರತಂಡ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದೆ. ಸಿನಿಮಾದ ಪ್ರಚಾರಕ್ಕೂ ಮುನ್ನ, ಸಿನಿಮಾದ ಮೊದಲ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದ್ದು ಯುಟ್ಯೂಬ್ ನಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ.

ಜೈಲರ್ ಸಿನಿಮಾದ ಹಾಡು ಯಾವಾಗ ಎಂದು ರಜನಿಕಾಂತ್ ಅಭಿಮಾನಿಗಳು ಕೇಳುತ್ತಿದ್ದರು. ಬೇಗ ಹಾಡು ರಿಲೀಸ್ ಮಾಡಿ ಎನ್ನುವುದು ಅವರ ಆಗ್ರಹ ಕೂಡ ಆಗಿತ್ತು. ಕೊನೆಗೂ ಚಿತ್ರತಂಡ ಅಭಿಮಾನಿಗಳ ಧ್ವನಿಗೆ ಸ್ಪಂದಿಸಿದೆ. ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳನ್ನು ಕುಣಿಸಿದೆ.

ಜೈಲರ್ ಸಿನಿಮಾವನ್ನು ಕರ್ನಾಟಕದಲ್ಲೂ ಶೂಟ್ ಮಾಡಲಾಗಿದೆ. ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಸಿದ್ದು, ಕರ್ನಾಟಕದ ಕಥೆಯನ್ನೂ ಈ ಸಿನಿಮಾ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

Loading

Leave a Reply

Your email address will not be published. Required fields are marked *