ಶಿವಮೊಗ್ಗ: ವಿಐಎಸ್ಎಲ್ ಕಾರ್ಖಾನೆಯನ್ನು ರಾಜ್ಯ ಸರಕಾರ ಬಂದ್ ಮಾಡುತ್ತೇವೆ ಅಂತ ಎಲ್ಲೂ ಹೇಳಿರಲಿಲ್ಲ. ಇಲ್ಲಿನ ಜನಪ್ರತಿನಿಧಿಗಳು, ಸಂಸದರು ಮಧ್ಯೆ ಬಂದು ಹೇಳಿಕೆ ಕೊಟ್ಟರು. ಇನ್ನೊಂದು ಏಳು ತಿಂಗಳಿಗೆ ಲೋಕಸಭೆ ಚುನಾವಣೆ ಬರಲಿದೆ. ವಿಐಎಸ್ಎಲ್ಗೆ ತಾತ್ಕಾಲಿಕವಾಗಿ ಚಾಲನೆ ಕೊಟ್ಟಿದ್ದಾರೆ. ಪೂರ್ಣವಾಗಿ ಚಾಲನೆ ಕೊಟ್ಟರೆ ಒಳ್ಳೆಯದು. ಕಾರ್ಖಾನೆ ಮುಚ್ಚದೆ ಮುಂದುವರಿಸಿದರೆ ಒಳ್ಳೆಯದು. ವಿಐಎಸ್ಎಲ್, ಎಂಪಿಎಂ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಕಿರೀಟ ಇದ್ದ ಹಾಗೆ. ಕಾರ್ಖಾನೆ ನಡೆಸಲು ಹೊರೆ ಇರುತ್ತದೆ. ಅದನ್ನು ಉಳಿಸುವುದು ಕೇಂದ್ರ ಸರಕಾರದ ಕೈಯಲ್ಲಿರುತ್ತದೆ. ಯಾರು ಯಾರು ಬಿಟ್ಟು ಹೋಗಿದ್ದಾರೆ ಅವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.