ಬೆಂಗಳೂರು: ಹಿಂದೆ ನೀವು ಎಲ್ಲ ಭಾಗ್ಯಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರಲಿಲ್ಲ. 2013ರಲ್ಲಿ ನಮ್ಮಲ್ಲಿನ ಒಡುಕುಗಳಿಂದ ನೀವು ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಇವಾಗ ನೀವು ಗೆದ್ದಿದ್ದೀರಿ ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆಪರೇಷನ್ ಕಮಲ ಅಂತೀರಲ್ಲ ಈ ಹಿಂದೆ ಕೆಲವರು ರಾಜೀನಾಮೆ ಕೊಟ್ಟಿದ್ದರು. ಇದರಲ್ಲಿ ಯಾವ ಆಪರೇಷನ್ ಬಂತು? ಆ ರೀತಿ ನೋಡುವುದಾದರೆ ಮೊದಲ ಬಾರಿಗೆ ಆಪರೇಷನ್ ಮಾಡಿದ್ದೇ ಕಾಂಗ್ರೆಸ್ ಎಂದು ತಿರುಗೇಟು ನೀಡಿದರು. ನಿಮಗೆ ಸಮ್ಮಿಶ್ರ ಸರ್ಕಾರ ಇದ್ದಾಗ ಜನರು ಆಶೀರ್ವಾದ ಮಾಡಿದ್ದರೇ? 80 ಸೀಟು ತಗೊಂಡು ನೀವು ದೇವೇಗೌಡರ ಮನೆ ಬಳಿ ಹೋಗಿ ಕಾದಿಲ್ಲವೇ ಎಂದು ಸಿಎಂಗೆ ಬೊಮ್ಮಾಯಿ ಮತ್ತು ಅಶೋಕ್ ತಿರುಗೇಟು ನೀಡಿದರು.