ಬೆಂಗಳೂರು: ಡಿಸಿಎಂ ಸಿಟಿ ರೌಂಡ್ಸ್ ಹಾಕುತ್ತಿರುವುದು ತುಂಬಾ ಸಂತೋಷ ನಾನು ಸ್ವಾಗತ ಮಾಡಲು ಬಂದಿದ್ದೇನೆ ಎಂದು ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಇಲ್ಲಿ ಜನರಿಗೆ ತುಂಬಾ ಸಮಸ್ಯೆ ಆಗುತ್ತಿತ್ತು ಅಂತ 350 ಕೋಟಿ ಸ್ಯಾಂಕ್ಷನ್ ಮಾಡಿಸಿ ಕಾಮಗಾರಿ ಮಾಡಿಸುತ್ತಿದ್ದೆ. ಕಾರ್ಯಕ್ರಮ ರೂಪಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ. ಸಾವಿರಾರು ವೆಹಿಕಲ್ಸ್ ಇಲ್ಲಿಂದ ಮದ್ರಾಸ್ ಆಂಧ್ರಾಗೆ ಹೋಗುತ್ತದೆ. ಮುಂದಿನ ದಿನಗಳಲ್ಲಿ ಕಾದು ನೋಡುತ್ತೇವೆ ಇಲ್ಲಿ ಯಾವ ರೀತಿ ಕೆಲಸಗಳು ಆಗುತ್ತವೆ ಅಂತ. ಆದರೆ ಈಗ ಕಾಂಗ್ರೆಸ್ ಸರ್ಕಾರ ಎನ್ ಮಾಡುತ್ತೆ ಅಂತ ನೋಡಬೇಕು. ನಮ್ಮ ಪಕ್ಷದ ಅವಧಿಯಲ್ಲಿ ಜಾರಿ ಅದಂತಹ ಕಾಮಗರಿಗಳಿಗೆ ಕೆಲವು ಕೆಲಸಗಳಿಗೆ ಇವರು ತಡೆ ನೀಡಿದ್ದಾರೆ ಎಂದರು.