ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ಇದು ನಮಗೆ ಸ್ಫೂರ್ತಿ ನೀಡುತ್ತದೆ: ಪ್ರಧಾನಿ ಮೋದಿ

ನವದೆಹಲಿ: ಸ್ವಾತಂತ್ರ್ಯ ದಿನದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ   ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ  ಅವರು ಭಾರತೀಯರಿಗೆ ಕರೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ಖಾತೆಗಳ ಪ್ರೊಫೈಲ್ ಚಿತ್ರಗಳನ್ನು  ತ್ರಿವರ್ಣ ಧ್ವಜವಾಗಿ ಬದಲಾಯಿಸಲು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ದೇಶ ಹಾಗೂ ಭಾರತೀಯರ ನಡುವೆ ಬಾಂಧವ್ಯವನ್ನು ಗಾಢವಾಗಿಸೋಣ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 13ರಿಂದ 15ರ ನಡುವೆ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಿಸಿ. ತಿರಂಗಾ ಜೊತೆಗಿನ ಫೋಟೋ ತೆಗೆದು ಹರ್ ಘರ್ ತಿರಂಗಾ ವೆಬ್ಸೈಟ್ನಲ್ಲಿ (harghartiranga.com.) ಅಪ್ಲೋಡ್ ಮಾಡಿ. ಪ್ರತಿಯೊಬ್ಬ ಭಾರತೀಯನೂ ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ಇದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನ ಇಂದಿನಿಂದ (ಭಾನುವಾರ) ಪ್ರಾರಂಭವಾಗುತ್ತದೆ. ಹಾಗೂ 77ನೇ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರ ವರೆಗೆ ಮುಂದುವರಿಯುತ್ತದೆ. ನಾಗರಿಕರಲ್ಲಿ ದೇಶಭಕ್ತಿಯ ಪ್ರಜ್ಞೆಯನ್ನು ಬಲಪಡಿಸಲು ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಸ್ಮರಿಸುವ ಸಲುವಾಗಿ ಸಂಸೃತಿ ಸಚಿವಾಲಯ ಈ ಅಭಿಯಾನವನ್ನು ಆಯೋಜಿಸಿದೆ.

Loading

Leave a Reply

Your email address will not be published. Required fields are marked *