ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. 3 ಜನ ಅಧಿಕಾರಿಗಳ ತಲೆದಂಡವಾಗಿದ್ರು, DC ಸೇರಿದಂತೆ ಮೂವರಿಗೆ ನೋಟೀಸ್ ಜಾರಿಮಾಡಲಾಗಿದೆ. ಸಭೆ ಸಮಾರಂಭ, ರಾಜಕೀಯ ಸಮಾವೇಶ, ಹಬ್ಬಗಳಲ್ಲಿ ಇನ್ಮುಂದೆ ಹಸಿರು ಪಟಾಕಿ ಬಿಟ್ಟು ಉಳಿದ್ದೆಲ್ಲಾ ಕ್ರ್ಯಾಕರ್ಸ್ ಬ್ಯಾನ್ ಮಾಡಲಾಗಿದೆ. ಇನ್ಮುಂದೆ ಪಟಾಕಿ ಗೋಡೌನ್, ಮಾರಾಟದ ಲೈಸೆನ್ಸ್ ಪಡೆಯಲು ಪ್ರತ್ಯೇಕ ಟಫ್ ರೂಲ್ಸ್ ಜಾರಿಗೆತರಲಾಗಿದೆ…
ಅತ್ತಿಬೆಲೆ ಪಟಾಕಿ ಗೋಡೌನ್ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ, 14 ಮಂದಿ ಸಜೀವ ದಹನವಾಗಿದ್ರೆ, 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವು ಕುಟುಂಬಗಳು ದುಃಖದ ಮಡುವೊನಲ್ಲಿ ಗೋಳಾಡ್ತಿವೆ, ರಾಜಧಾನಿ ಜನರನ್ನೇ ಬೆಚ್ಚಿಬೀಳಿಸಿದೆ ಈ ಘಟನೆ. ಈ ದುರಂತಕ್ಕೆ ಕಾರಣ ಏನು ಎಂಬುದು ಇನ್ನು ಹೊರಬಂದಿಲ್ಲ ಆದ್ರೆ ಅಧಿಕಾರಿಗಳ ತಪ್ಪುಗಳು ಒಂದೊಂದೇ ಹೊರಬರ್ತಿವೆ. ಸರ್ಕಾರ ಘಟನೆಯ ತನಿಖೆಯನ್ನ ಈಹಾಗ್ಲೆ CID ವಹಿಸಿದ್ದು, ಮುಂದೆ ಈ ರೀತಿ ದುರಂತಗಳಾಗದಂತೆ ಮುನ್ನೆಚ್ಚರಿಕೆ ವಹಿಸ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂಭಂದಪಟ್ಟ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ಹಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಾರೆ…
ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದ್ದಾರೆ ಸಿಎಂ. ಇನ್ಮುಂದೆ ಪಟಾಕಿ ಲೈಸನ್ಸ್ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ತಪಾಸಣಾ ವರದಿ ಸರಿಯಾಗಿದೆಯೇ ಎಂದು ಪರಿಶೀಲಿಸಿಯೇ ಲೈಸನ್ಸ್ ನೀಡಬೇಕೆಂದು ಟಫ್ ರೂಲ್ಸ್ ತರಲಾಗಿದೆ. ರಾಜ್ಯಾದ್ಯಂತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು,
ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸಿಎಂ ಆದೇಶಿಸಿದ್ದಾರೆ. ಇನ್ಮುಂದೆ ಪ್ರತಿ ವರ್ಷ ಪಟಾಕಿ ಲೈಸೆನ್ಸ್ ತಗೊಬೇಕು ಹಾಗೂ ಮಾರಾಟ ಮಾಡೋ ಜಾಗ ಅಕ್ಕ- ಪಕ್ಕ ಮುಂದೆ ಖಾಲಿ ಇರಬೇಕು ಪ್ರತ್ಯೇಕ ಗೈಡ್ ಲೈನ್ಸ್ ಹೊರಡಿಸಲಾಗಿದೆ. ರಾಜಕೀಯ ಕಾರ್ಯಕ್ರಮ, ಗಣೇಶ ಹಬ್ಬ, ಮದುವೆ ಸಮಾರಂಭ, ಮೆರವಣಿಗೆಗಳಲ್ಲೂ ಪಟಾಕಿ ಬ್ಯಾನ್ ಮಾಡಲಾಗಿದ್ದು, ಗ್ರೀನ್ ಕ್ರ್ಯಾಕರ್ಸ್ ಗೆ ಮಾತ್ರ ಅವಕಾಶ ಕೊಡಲಾಗಿದೆ. ಅದೇಶ ಮೀರಿದ್ರೆ ಕ್ರಮ ಕೈಗೊಳ್ಳೋದಾಗಿ ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ..