ಈ ತಿಂಗಳು ಆಗಲಿಲ್ಲ ಅಂದ್ರೆ ಮುಂದಿನ ತಿಂಗಳು ಅಕ್ಕಿ ಕೊಡುತ್ತೇವೆ: ಸತೀಶ್ ಜಾರಕಿಹೊಳಿ

ಈ ತಿಂಗಳು ಆಗಲಿಲ್ಲ ಅಂದ್ರೆ ಮುಂದಿನ ತಿಂಗಳು ಅಕ್ಕಿ ಕೊಡುತ್ತೇವೆ ಎಂದು ತುಮಕೂರಿನಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 10 ಕೆಜಿ ಅಕ್ಕಿ ನೀಡುವಾಗ ತಡವಾಗಬಹುದು. ಆದರೆ 5 KG ಅಕ್ಕಿ ಈಗಾಗಲೇ ನೀಡಲಾಗುತ್ತಿದೆ. ಎಲ್ಲಾ ರಾಜ್ಯಗಳಿಂದ ಹಾಗೂ ಕೇಂದ್ರದ ಸ್ವಾಮ್ಯಗಳಿಂದ ಅಕ್ಕಿ ತರಲು ಪ್ರಯತ್ನ ನಡೆಯುತ್ತಿದೆ ಎಂದರು. 5 ಕೆಜಿ ಜೊತೆ 10 ಕೆಜಿ ಅಕ್ಕಿ ನೀಡುವ ಬಿಜೆಪಿ ವಾದದ ಬಗ್ಗೆ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ತೆಗೆದು ನೋಡಲಿ 5 ಕೆ.ಜಿ‌ ಸೇರಿಸಿ 10ಕೆಜಿ ಕೊಡುತ್ತೇವೆ ಅಂತ ನಾವು ಚುನಾವಣೆಯಲ್ಲಿ ಹೇಳಿದ್ದಾಗಿ ತಿಳಿಸಿದರು.

Loading

Leave a Reply

Your email address will not be published. Required fields are marked *