ಭಾರತದಲ್ಲಿರುವ ಇಸ್ರೇಲಿ ಪ್ರಜೆಗಳು ಸ್ಥಿತಿ ಬಗ್ಗೆ ಹೇಳಿದ ಇಸ್ರೇಲ್ ಮಹಿಳೆಯರು..!

ಜೆರುಸಲೇಂ: ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ (Israel Hamas war) ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಈ ಯುದ್ಧದಲ್ಲಿ ನಡೆಯುತ್ತಿರುವ ಹಿಂಸಾಚಾರ, ರಕ್ತಪಾತ ಇಸ್ರೇಲ್ (Israel) ಜನರ ಮೇಲೆ ಮಾತ್ರವಲ್ಲ. ಭಾರತದಲ್ಲಿರುವ ಅವರ ಸಂಬಂಧಿಕರ ಮೇಲೂ ಪರಿಣಾಮ ಬೀರಿದೆ. ಭಾರತದಲ್ಲಿರುವ ಇಸ್ರೇಲ್ ಮಹಿಳೆಯರು ಹಮಾಸ್ ಉಗ್ರರ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.ಭೀಕರ ಯುದ್ಧದ (War) ಪರಿಣಾಮದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತದಲ್ಲಿರುವ ಇಸ್ರೇಲಿ ಪ್ರಜೆಗಳು (Indian Israelis) ಅಲ್ಲಿನ ಸ್ಥಿತಿಯನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ಹಮಾಸ್ ಉಗ್ರರ ಹಠಾತ್ ದಾಳಿಯಿಂದ ಕೋಪಗೊಂಡಿರುವ ಭಾರತದಲ್ಲಿರುವ ಇಸ್ರೇಲಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ಸ್ವಲ್ಪ ಸಮಯದಿಂದ ಭಾರತದಲ್ಲಿ ಉಳಿದುಕೊಂಡಿದ್ದರೆ, ಇನ್ನೂ ಕೆಲವರು ಶೀಘ್ರವೇ ತಮ್ಮ ತಾಯ್ನಾಡಿಗೆ ಮರಳಲು ಸಿದ್ಧರಾಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಭಾರತದ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ವಾಸಿಸುತ್ತಿರುವ ಇಸ್ರೇಲಿ ಮಹಿಳೆ ಕೆನೆರಿಯಾತ್,

ಹಮಾಸ್ ಉಗ್ರರ ದಾಳಿ ಬಳಿಕ ಇಸ್ರೇಲ್ನಲ್ಲಿರುವ ತಮ್ಮ ಕುಟುಂಬದೊಂದಿಗೆ ನಡೆಸಿದ ಸಂಭಾಷಣೆಯನ್ನು ವಿವರಿಸಿದ್ದಾರೆ. ನಮ್ಮ ಮನೆ ಉಗ್ರರ ಬಾಂಬ್ ಸ್ಫೋಟದಿಂದ ಧ್ವಂಸವಾಗಿದೆ. ನನ್ನ ಸೋದರ ಸಂಬಂಧಿ ಗುಂಡಿನ ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಇಸ್ರೇಲ್ನಲ್ಲಿ ವಾಸಿಸುತ್ತಿರುವ ನಮ್ಮ ಮನೆ ಬಾಂಬ್ ದಾಳಿಗೆ ಧ್ವಂಸವಾಗಿದೆ. ಆದ್ರೆ ನನ್ನ ಸಹೋದರನೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನು ಭಾರತದಲ್ಲಿ ಸುರಕ್ಷಿತವಾಗಿರುವುದರಿಂದ, ಹೆದರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕುಲು ಜಿಲ್ಲಿಯರುವ ಮತ್ತೊಬ್ಬರು ಇಸ್ರೇಲಿ ಪ್ರವಾಸಿ ಶಿರಾ ಮಾತನಾಡಿದ್ದು, ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯೂ ಅತ್ಯಂತ ಕ್ರೂರ ಮತ್ತು ಭೀಕರವಾಗಿದೆ. ಖಂಡಿತವಾಗಿಯೂ ಇಷ್ಟೊಂದು ಕ್ರೂರವಾಗಿರುತ್ತೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ. ಸದ್ಯ ಭಾರತ ಬೆಂಬಲಕ್ಕೆ ನಿಂತಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ವಿಶ್ವದ ಇತರ ರಾಷ್ಟ್ರಗಳು ಇಸ್ರೇಲ್ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Loading

Leave a Reply

Your email address will not be published. Required fields are marked *