IPL 2023: SRH – KKR ನಡುವೆ ನೇರಾ ಹಣಾಹಣಿ

ಹೈದರಾಬಾದ್ : ಐಪಿಎಲ್ 2023 ಟೂರ್ನಿಯ 47ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯಲ್ಲಿ 2ನೇ ಬಾರಿ ಮುಖಾಮುಖಿಯಾಗಲು ಹೊರಟಿವೆ. ಏಪ್ರಿಲ್ 14 ರಂದು ನಡೆದಿದ್ದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 23 ರನ್ ಗಳ ಗೆಲುವು ಸಾಧಿಸಿರುವ ಸನ್ ರೈಸರ್ಸ್ ಹೈದರಾಬಾದ್, ತವರು ಅಂಗಳದಲ್ಲೂ ಪ್ರವಾಸಿ ತಂಡವನ್ನು ಮಣಿಸಲು ಸಜ್ಜಾಗಿದ್ದರೆ, ಹಿಂದಿನ ಪಂದ್ಯದ ಸೋಲಿನ ಪ್ರತೀಕಾರ ತೀರಿಸಿಕೊಳ್ಳುವ ಲೆಕ್ಕಾಚಾರವನ್ನು ಕೆಕೆಆರ್ ಹಾಕಿಕೊಂಡಿದೆ.

ಸನ್ ರೈಸರ್ಸ್ ಹೈದ್ರಾಬಾದ್ ತನ್ನ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದ್ದರೆ, ಪ್ರಸಕ್ತ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಕೆಕೆಆರ್ ಸೋಲು ಕಂಡಿದೆ. ಪ್ಲೇ ಆಫ್ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿದ್ದು, ಮುಂದಿನ ಹಂತಕ್ಕೆ ತಲುಪಲು ಎರಡು ತಂಡಗಳಿಗೂ ಗೆಲುವು ಅವಶ್ಯಕವಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7.30 ಕ್ಕೆ ನಡೆಯಲಿರುವ ಟೂರ್ನಿಯ 47ನೇ ಪಂದ್ಯದಲ್ಲಿ ಇತ್ತಂಡಗಳಲ್ಲೂ ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಗಳಿದ್ದು ಮತ್ತೊಂದು ಹೈ-ಸ್ಕೋರಿಂಗ್ ಪಂದ್ಯ ನಿರೀಕ್ಷಿಸಬಹುದು.

ಎಸ್ಆರ್ಎಚ್‌ ಸಂಭಾವ್ಯಪ್ಲೇಯಿಂಗ್ XI

ಅಭಿಷೇಕ್ ಶರ್ಮಾ, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹ್ಯಾರಿ ಬ್ರೂಕ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಅಕೇಲ್ ಹೊಸೈನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್.

ಕೆಕೆಆರ್‌ ಸಂಭಾವ್ಯಪ್ಲೇಯಿಂಗ್ XI
ಎನ್ ಜಗದೀಸನ್, ರೆಹಮಾನುಲ್ಲಾ ಗುರ್ಬಝ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನೀಲ್ ನರೈನ್, ಡೇವಿಡ್ ವೀಸ, ಶಾರ್ದುಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಪಂದ್ಯದವಿವರ
ಐಪಿಎಲ್ 2023, ಪಂದ್ಯ 47
ಎಸ್‌ಆರ್‌ಎಚ್‌ vs ಕೆಕೆಆರ್‌
ದಿನಾಂಕ: ಮೇ 4, ಸಂಜೆ 7.30ಕ್ಕೆ
ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ

Loading

Leave a Reply

Your email address will not be published. Required fields are marked *