ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಇಲ್ಲದಿರುವುದು ಅಸಂಬದ್ಧವಾಗಿದೆ: ಎಲಾನ್ ಮಸ್ಕ್

ವಾಷಿಂಗ್ಟನ್:‌ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಇಲ್ಲ ಎಂಬುದರ ಬಗ್ಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಳೆದ 16 ವರ್ಷದಿಂದ ಭಾರತವು ತಾತ್ಕಾಲಿಕ ಸದಸ್ಯತ್ವ ಪಡೆದಿದೆ. ಅಮೆರಿಕ , ಬ್ರಿಟನ್‌, ರಷ್ಯಾ , ಫ್ರಾನ್ಸ್‌ ಹಾಗೂ ಚೀನಾ ಖಾಯಂ ಸದಸ್ಯತ್ವ ಪಡೆದಿವೆ. ಭಾರತಕ್ಕೆ ಖಾಯಂ ಸ್ಥಾನ ನೀಡಲು ಚೀನಾ ಮಾತ್ರ ವಿರೋಧಿಸುತ್ತಿದೆ.

ಹಲವು ವರ್ಷಗಳಿಂದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಸ್ಥಾನಕ್ಕೆ ಭಾರತ ಮನವಿ ಮಾಡುತ್ತಿದ್ದರೂ ಇದಕ್ಕೆ ಇನ್ನೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ.ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ಇನ್ನೂ ಹೆಚ್ಚಿನ ಅಧಿಕಾರ ಬಳಸಲು ಪ್ರಯತ್ನಿಸುತ್ತಿರುವ ಕಾರಣ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡಲಾಗಿಲ್ಲ. ಹೀಗಾಗಿ ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು.

ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ ಎಂದು ಎಲಾನ್‌ ಮಸ್ಕ್‌ ತಿಳಿಸಿದ್ದಾರೆ. ಎಲಾನ್‌ ಮಸ್ಕ್‌ ಅವರ ಮಾತನ್ನು ವಿಶ್ವಸಂಶ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ‍್ರೆಸ್‌ ಅನುಮೋದಿಸಿದ್ದು, ಜಗತ್ತಿನ ಯಾವುದೇ ಸಂಸ್ಥೆಗಳು ಆಧುನಿಕ ಜಗತ್ತನ್ನು ಪ್ರತಿಬಿಂಬಿಸಬೇಕೇ ಹೊರತು 80 ವರ್ಷದ ಹಿಂದಿನ ಜಗತ್ತನ್ನಲ್ಲ ಎಂದು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *