ನೇಪಾಳ ವಿರುದ್ಧ ಗೆದ್ದು ಸೆಮಿಫೈನಲ್ ಗೆ ಲಗ್ಗೆಯಿಟ್ಟ ಭಾರತ!

ಬೆಂಗಳೂರು: ನಾಯಕ ಸುನೀಲ್‌ ಚೆಟ್ರಿ ಅವರ ಆರಂಭಿಕ ಗೋಲಿನ ಬಲದಿಂದ ಶನಿವಾರ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಫುಟ್ಬಾಲ್‌ ತಂಡ  ಗೆದ್ದು, ಸ್ಯಾಫ್‌ ಫುಟ್ಬಾಲ್‌ ಚಾಂಪಿಯನ್‌ಶಿಪ್‌  ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

ಶನಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಚೆಟ್ರಿ ಬಳಗ ರಸದೌತಣ ನೀಡುವ ಜೊತೆಗೆ ಎದುರಾಳಿ ನೇಪಾಳ ತಂಡವನ್ನ 2-0 ಅಂತರದಲ್ಲಿ ಮಣಿಸಿತು.

ಭಾರತ ಮತ್ತು ನೇಪಾಳ ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಫಸ್ಟ್‌ ಹಾಫ್‌ನಲ್ಲಿ ಇತ್ತಂಡಗಳ ಸಮಬಲ ಪೈಪೋಟಿಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಸೆಕೆಂಡ್‌ ಹಾಫ್‌ನಲ್ಲಿ ನಾಯಕ ಸುನೀಲ್‌ ಚೆಟ್ರಿ ಮ್ಯಾಜಿಕ್‌ನಿಂದ ಮೊದಲ ಗೋಲು ದಾಖಲಾಯಿತು. ಈ ಮೂಲಕ ಚೆಟ್ರಿ 91ನೇ ಅಂತಾರಾಷ್ಟ್ರೀಯ ಗೋಲನ್ನು ದಾಖಲಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸಹ ಆಟಗಾರ ಮಹೇಶ್‌ ಸಿಂಗ್‌ ಮತ್ತೊಂದು ಗೋಲು ದಾಖಲಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು ಆರಂಭಿಕ ಪಂದ್ಯದಲ್ಲೇ 4-0 ಗೋಲುಗಳ ಅಂತರದಲ್ಲಿ ಪಾಕಿಸ್ತಾನ  ತಂಡವನ್ನು ಮಣಿಸಿದ್ದ ಭಾರತ ತಂಡ ಸತತ 2ನೇ ಗೆಲುವು ದಾಖಲಿಸುವ ಮೂಲಕ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

Loading

Leave a Reply

Your email address will not be published. Required fields are marked *