ದೆಹಲಿ: ಭಾರತ ತಂಡದ 2023-24ರ ಸಾಲಿನ ತವರು ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜುಲೈ 25 ರಂದು ಪ್ರಕಟಿಸಿದೆ.
ಅಕ್ಟೋಬರ್ 5 ರಿಂದ ಭಾರತದ ಆತಿಥ್ಯದಲ್ಲಿ 2023ರ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಇನ್ನೂ 3 ತಿಂಗಳುಗಳು ಮಾತ್ರ ಬಾಕಿ ಇವೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸಲಿದೆ. ಸೆಪ್ಟಂಬರ್ 22 ರಿಂದ ಈ ಏಕದಿನ ಸರಣಿ ಆರಂಭವಾಗಲಿದೆ. ಆ ಮೂಲಕ ವಿಶ್ವಕಪ್ ಟೂರ್ನಿಗೆ ಈ ಎರಡೂ ತಂಡಗಳು ಸಜ್ಜಾಗಲಿವೆ.
ಏಕದಿನ ವಿಶ್ವಕಪ್ ಟೂರ್ನಿಯ ನಂತರ ಭಾರತ ತಂಡ, 2023-24ರಲ್ಲಿ ತವರು ಅಂಗಳದಲ್ಲಿ ಆಸ್ಟ್ರೇಲಿಯಾ, ಅಫಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ವಿವಿಧ ಸರಣಿಗಳನ್ನು ಆಡಲಿದೆ. ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಮೊಹಾಲಿ, ಇಂಧೋರ್ ಮತ್ತು ರಾಜ್ ಕೋಟ್ನಲ್ಲಿ ಪಂದ್ಯಗಳು ನಡೆಯಲಿವೆ.
ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದು, ವಿಶಾಖಪಟ್ಟಣಂನಲ್ಲಿ ನವೆಂಬರ್ 23 ರಂದು ಆರಂಭಗೊಳ್ಳಲಿರುವ ಸರಣಿ, ಹೈದರಾಬಾದ್ನಲ್ಲಿ ಡಿಸೆಂಬರ್ 3 ರಂದು ನಡೆಯಲಿರುವ ಪಂದ್ಯದ ಮೂಲಕ ಮುಕ್ತಾಯವಾಗಲಿದೆ
ಭಾರತ vs ಆಸ್ಟ್ರೇಲಿಯಾ ಟಿ20 ಸರಣಿ
* ಮೊದಲ ಟಿ20 ಪಂದ್ಯ- ನವೆಂಬರ್ 23, 2023-ವಿಶಾಖಪಟ್ಟಣಂ
* ಎರಡನೇ ಟಿ20 ಪಂದ್ಯ- ನವೆಂಬರ್ 26, 2023- ತಿರುವನಂತಪುರಂ
* ಮೂರನೇ ಟಿ20 ಪಂದ್ಯ – ನವೆಂಬರ್ 28, 2023- ಗುವಾಹಟಿ
* ನಾಲ್ಕನೇ ಟಿ20 ಪಂದ್ಯ – ಡಿಸೆಂಬರ್ 1, 2023- ನಾಗ್ಪುರ
* ಐದನೇ ಟಿ20 ಪಂದ್ಯ-ಡಿಸೆಂಬರ್ 03, 2023- ಹೈದರಾಬಾದ್
ಅಫ್ಘಾನಿಸ್ತಾನ vs ಭಾರತ ಟಿ20 ಸರಣಿ
* ಮೊದಲ ಟಿ20 ಪಂದ್ಯ- ಜನವರಿ 11, 2024- ಮೊಹಾಲಿ
* ಎರಡನೇ ಟಿ20 ಪಂದ್ಯ – ಜನವರಿ 14, 2024- ಇಂಧೋರ್
* ಮೂರನೇ ಟಿ20 ಪಂದ್ಯ- ಜನವರಿ 17, 2024- ಬೆಂಗಳೂರು
ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ
* ಮೊದಲ ಟೆಸ್ಟ್ – ಜನವರಿ 25 – ಜನವರಿ 29, 2024- ಹೈದರಾಬಾದ್
* ಎರಡನೇ ಟೆಸ್ಟ್- ಫೆಬ್ರವರಿ 02 – ಫೆಬ್ರವರಿ 06, 2024- ವಿಶಾಖಪಟ್ಟಣಂ
* ಮೂರನೇ ಟೆಸ್ಟ್- ಫೆಬ್ರವರಿ 15- ಫೆಬ್ರವರಿ 19, 2024- ರಾಜ್ಕೋಟ್
* ನಾಲ್ಕನೇ ಟೆಸ್ಟ್ ಫೆಬ್ರವರಿ 23 -ಫೆಬ್ರವರಿ 27, 2024- ರಾಂಚಿ
* ಐದನೇ ಟೆಸ್ಟ್ – ಮಾರ್ಚ್ 07 -ಮಾರ್ಚ್ 11, 2024- ಧರ್ಮಶಾಲಾ