ಬೆಂಗಳೂರು: ಕಾವೇರಿ ಕಿಚ್ಚು ಮುಂದುವರಿದಿದ್ದು. ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 26 ನೇ ತಾರೀಕು ಬೆಂಗಳೂರು ಬಂದ್ ಕರೆ ನೀಡಲಾಗಿದೆ.
ಇಂದು ಮಂಡ್ಯ ಬಂದ್ ಮಾಡಿರುವ ಹಿನ್ನೆಲೆ ವಿವಿಧ ಸಂಘಟನೆಗಳಿಂದ ಬೆಂಗಳೂರು ಬಂದ್ ಕರೆ ನೀಡಲಾಗಿದೆ. ಕಾವೇರಿ ನೀರಿನ ಉಳಿವಿಗಾಗಿ ಬಂದ್ ಕರೆ ನೀಡಿದ್ದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಭೆಯಲ್ಲಿ ಬಂದ್ ನಡೆಸಲು ತೀರ್ಮಾನ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಿದ್ದು ಇಡೀ ಬೆಂಗಳೂರನ್ನ ಬಂದ್ ಮಾಡಲು ಕರೆ ಕೊಡಲು ನಿರ್ಧಾರಿಸಲಾಗಿದೆ.