ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕುಂಬಳಗೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಣ್ಮಣಿಕೆ ಕಾಲೋನಿ ಎಸ್ ಎಲ್ ವಿ ಸ್ವಿಮ್ಮಿಂಗ್ ಪೂಲ್ ಉದ್ಘಾಟನಾ ಸಮಾರಂಭವನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಎಸ್ ಟಿ ಸೋಮಶೇಖರ್ ರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಜುವುದು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇಂದಿನ ಮಕ್ಕಳಿಗೆ ಅಗತ್ಯವಾಗಿ ಇಂತಹ ದೈಹಿಕ ಆರೋಗ್ಯವಂತ ರಾಗಲು ಇದು ಅತ್ಯಗತ್ಯ ಎಂದು ಹೇಳಿದರು.
ಹಾಗೂ ಈ ಸಂದರ್ಭದಲ್ಲಿ ಮಾಲೀಕರಾದ ಮಂಜುನಾಥ್ ರವರು ಮಾತನಾಡಿ ಸುತ್ತಮುತ್ತಲು ಸ್ವಿಮ್ಮಿಂಗ್ ಪೂಲ್ ಅವಶ್ಯಕತೆ ಎಲ್ಲರಿಗೂ ಅವಶ್ಯಕವಾಗಿತ್ತು ಆದಕಾರಣ ಇಲ್ಲಿ ತೆರೆದಿದ್ದೇವೆ ಇದರ ಸದುಪಯೋಗವನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಎಲ್ಲಾ ನಾಗರಿಕರು ಸುದ್ಬಳಕೆ ಮಾಡಬೇಕೆಂದು ಹೇಳಿದರು.
ಹಾಗೂ ಇದು ಸಂದರ್ಭದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಒಂದು ದಿವಸ ಉಚಿತ ಸ್ವಿಮ್ಮಿಂಗ್ ಫೂಲ್ ಅನ್ನು ಬಳಕೆ ಮಾಡಬಹುದು ಎಂದರು ಹಾಗೂ ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡಲು ಇದನ್ನು ಉದ್ಘಾಟನೆ ಮಾಡಿದ್ದೇವೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕುಂಬಳಗೂಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಿರಿಯ ನಾಗರಿಕರು ಅನೇಕ ಸ್ನೇಹಿತರು ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಉಪಸಿತರಿದ್ದರು.