ಬಿಜೆಪಿಯಲ್ಲಿ ಬಿ.ಎಲ್. ಸಂತೋಷ್ ವಿರುದ್ಧ ಅಸಮಾಧಾನ ಸ್ಫೋಟ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ,ಪಕ್ಷದೊಳಗೆ ಬಿ ಎಲ್ ಸಂತೋಷ್ ವಿರುದ್ಧ ಅಸಮಧಾನ ಸ್ಪೋಟವಾಗಿದೆ. ಬಿ ಎಲ್ ಸಂತೋಷ್ ರಾಜಕೀಯವಾಗಿ ತೀರ್ಮಾನಗಳಿಗೆ ಬಿಜೆಪಿ ಮಕಾಡೆ ಮಲಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕಪಡಿಸಿದ್ದಾರೆ.ನಿನ್ನೆ ನಡೆದ ಬಿಜೆಪಿ ಸೋಲಿನಾ ಪರಾಮರ್ಶೆ ಸಭೆಯಲ್ಲಿ ಬಿ ಎಲ್ ಸಂತೋಷ ವಿರುದ್ಧ ಬಿಜೆಪಿ ನಾಯಕರು ಬೆಂಕಿಯುಗಳಿದ್ದಾರೆ.

 

ಸೋಲು. ಹತಾಶೆ. ಅಸಮಾಧಾನ.. ನೋವು. ಹೌದು.. ಇದು ಬಿಜೆಪಿ ಪರಾಜಿತ ಅಭ್ಯರ್ಥಿಗಳ ಮುಖದಲ್ಲಿ ಗೋಚರಿಸಿತ್ತು.. ಇತ್ತ ಗೆದ್ದ ಸಂತೋಷದಲ್ಲಿದ್ದರು ಅಧಿಕಾರದಲ್ಲಿ ಇಲ್ಲ ಎಂಬ ಸಂಕಟ ಗೆದ್ದ ಬಿಜೆಪಿ ಶಾಸಕರಲ್ಲಿತ್ತು.. ಈ ಎರಡು ಕ್ಷಣಕ್ಕೆ ಸಾಕ್ಷಿಯಾಗಿದ್ದು ರಾಜ್ಯ ಬಿಜೆಪಿ ಕಚೇರಿ. ಇದರ ಜತೆ ಬಿ ಎಲ್ ಸಂತೋಷ್ ವಿರುದ್ದ ಸಭೆಯಲ್ಲಿ‌ ಸಾಕಷ್ಟು ಅಸಮಾಧಾನ ಹೊರಹಾಕಿದ್ರು..

ಎಲೆಕ್ಷನ್ ಮುಗಿದು ತಿಂಗಳಾಗಿದ್ರು ಬಿಜೆಪಿ ನಾಯಕರು ಆತ್ಮಾವಲೋಕನ ಸಭೆಯೇ ನಡೆಸಿರಲಿಲ್ಲ.. ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಕೊನೆಗೂ ಬಿಜೆಪಿ ನಾಯಕರ ಒಗ್ಗೂಡಿಸುವ ಪ್ರಯತ್ನ ಕೂಡ ನಡೀತು.. ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಸೋತ ಹಾಗೂ ಗೆದ್ದ ನಾಯಕರ ಜೊತೆಗೆ ರಾಜ್ಯ ಬಿಜೆಪಿ ಹಿರಿಯ ನಾಯಕರು ಆತ್ಮಾವಲೋಕನ ಸಭೆ ನಡೆಸಿದರು.. ಸಭೆಯಲ್ಲಿ ಬಿಎಲ್ ಸಂತೋಷ್ ವಿರುದ್ದ ಗುಡುಗಿದ್ರು.. ಸೋಲಿಗೆ ಬಿಎಲ್ ಸಂತೋಷ್ ರವರ ಅತಿಯಾದ ಇಂಟ್ರಾಸ್ಟ್ ಕಾರಣ ಎಂದು ಗುಡುಗಿದ್ರು..

ಒಂದ್ಕಡೆ ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕಸರತ್ತು ಜೋರಾಗಿದ್ರೆ, ಮತ್ತೊಂದು ಕಡೆ ಸೋಲಿಗೆ ಅಸಮಾಧಾನವು ಆತ್ಮಾವಲೋಕನದ ಮೂಲಕ‌ ಹೊರ ಬಿದ್ದಿದೆ.. ರಾಜ್ಯ ಬಿಜೆಪಿ ಕಚೇರಿಯಲ್ಲಿ ಗೆದ್ದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರೆ, ಇತ್ತ ಸೋತ ನಾಯಕರು ಸೋಲಿಗೆ ಪರಾಮರ್ಶೆ ಮಾಡಲಾಯಿತು.. ಸಭೆಯಲ್ಲಿ ಪಕ್ಷ ಸಂಘಟನೆಯೇ ಎಲ್ಲದಕ್ಕೂ ಮೂಲ ಮಂತ್ರ ಎಂಬ ಸಂದೇಶ ರವಾನೆ ಮಾಡಿದ್ರು. ಈ ಮೂಲಕ ಮುಂಬರುವ ಚುನಾವಣೆ ಸಿದ್ದತೆಗಳ ಬಗ್ಗೆ ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ರು..

Loading

Leave a Reply

Your email address will not be published. Required fields are marked *