ಕಲಬುರ್ಗಿ;- ಸಚಿವ ಸಂತೋಷ ಲಾಡ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕಾರ್ಮಿಕರ ಕಾರ್ಡ್‌ಗೆ ಹೊಸ ನಿಯಮ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶೇ 70ರಷ್ಟು ಕಾರ್ಮಿಕ ಕಾರ್ಡ್‌ಗಳು ನಕಲಿ ಕಾರ್ಡ್‌ಗಳಾಗಿದ್ದು, ನಕಲಿ ಹಾವಳಿ ತಡೆಗೆ ಹೊಸ ನಿಯಮಗಳನ್ನು ತರಲಾಗುವುದು. ಕಳೆದ ಮೂರು ವರ್ಷಗಳಲ್ಲಿ 39 ಲಕ್ಷ ಕಾರ್ಡ್‌ಗಳು ಏರಿಕೆಯಾಗಿವೆ. ಒಟ್ಟು 45 ಲಕ್ಷ ಕಾರ್ಮಿಕ ಕಾರ್ಡ್‌ಗಳಿದ್ದು, ಹಾವೇರಿ ಜಿಲ್ಲೆಯಲ್ಲೇ 3 ಲಕ್ಷ ಕಾರ್ಡ್‌ಗಳಿವೆ. ಹೀಗಾಗಿ, ನಕಲಿ ಕಾರ್ಡ್‌ಗಳನ್ನು ಸ್ವಚ್ಛ ಮಾಡಬೇಕಿದೆ’ ಎಂದರು.
‘ಶುದ್ಧತೆಯನ್ನು ರಾತ್ರೋರಾತ್ರಿ ಮಾಡಲು ಆಗುವುದಿಲ್ಲ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಹೊಸ ಅರ್ಜಿ, ನವೀಕರಣಕ್ಕಾಗಿ ಹೊಸ ನಿಯಮಗಳನ್ನು ಹಾಕುತ್ತೇವೆ. ಇದಕ್ಕೆ ಕಾರ್ಮಿಕ ಸಂಘಟನೆಗಳು ಸಹಕರಿಸಬೇಕು. ಕೆಲವು ದಿನಗಳಲ್ಲಿ ಕಾರ್ಮಿಕರ ಮಕ್ಕಳ 6 ಲಕ್ಷ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಪಾವತಿ ಮಾಡಲಾಗುವುದು’ ಎಂದು ಹೇಳಿದರು.