ಬಾಳೆಹಣ್ಣಿನ ಸಿಪ್ಪೆಯಲ್ಲಿ ಇರುವ ಪೌಷ್ಟಿಕಾಂಶಗಳಿಂದ ದೇಹಕ್ಕೆ ಉಂಟಾಗುವ ಪ್ರಯೋಜನಗಳು ಒಂದು ಮಧ್ಯಮ ಗಾತ್ರದ ಬಾಳೆ ಹಣ್ಣನ್ನು ತೆಗೆದುಕೊಂಡು ಅದರ ಹಣ್ಣಿನಲ್ಲಿರುವ ವಿವಿಧ ರೀತಿಯ ಪೌಷ್ಟಿಕ ಸತ್ವಗಳ ಅನ್ವೇಷಣೆಗೆ ಮುಂದಾದರೆ, ಅದರಲ್ಲಿ ನಮಗೆ ಕಾಣಸಿಗುವುದು ನಮ್ಮ ದೇಹಕ್ಕೆ ನಾವು ಪ್ರತಿ ದಿನ ಅಗತ್ಯವಾಗಿ ಸೇವಿಸಲೇಬೇಕಾದ ಪೌಷ್ಟಿಕಾಂಶಗಳ ಪ್ರಮಾಣ. ಬಾಳೆ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳ ಪ್ರಮಾಣ ಮತ್ತು ಅದರಿಂದ ಆಗುವ ಉಪಯೋಗಗಳು
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ನಾರಿನಾಂಶವಿದೆ. ನಿಯಮಿತವಾಗಿ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬಹುದು. ಇದು ಮಲಬದ್ಧತೆ, ಅತಿಸಾರ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ ಬಾಳೆಹಣ್ಣಿನ ಸಿಪ್ಪೆ ಬಳಸಿ ವಾರಕ್ಕೊಮ್ಮೆ ಹಲ್ಲುಗಳನ್ನು ಉಜ್ಜಿದಾಗ ಹೊಳಪು ಬರಲು ಸಹಾಯಕವಾಗಿದೆ. ಇದರಲ್ಲಿರುವ ಪೊಟ್ಯಾಷಿಯಂ ಮತ್ತು ಮೆಗ್ನೀಷಿಯಂ ಅಂಶ ದವಡೆಯನ್ನು ಸದೃಢಗೊಳಿಸುತ್ತದೆ. ಇದರಲ್ಲಿರುವ ಖನಿಜಾಂಶದಿಂದ ಹಲ್ಲುಗಳು ಹೊಳಪು ಕಾಣುತ್ತವೆ.
ಮೊಡವೆ ಸಮಸ್ಯೆಯಿಂದ ಪರಿಹಾರ ಮುಖದಲ್ಲಿ ಏಳುವ ಮೊಡವೆಗಳನ್ನು ತೆಗೆದುಹಾಕಲು ಬಾಳೆಹಣ್ಣಿನ ಸಿಪ್ಪೆ ಸಹಾಯಕವಾಗಿದೆ. ಬಾಳೆಹಣ್ಣಿ ಸಿಪ್ಪೆಯ ಒಳ ಪದರದ ಮೂಲಕ ಮುಖವನ್ನು ಉಜ್ಜಿದರೆ ಒಡವೆಗಳು ಏಳುವುದಿಲ್ಲ. ವಾರಕ್ಕೊಮ್ಮೆ ಮುಖವನ್ನು ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜುವ ಅಭ್ಯಾಸ ಒಳ್ಳೆಯದು. ಜತೆಗೆ ಇದರಲ್ಲಿವ ಪೋಷಕಾಂಶಗಳು ಚರ್ಮದ ಉರಿಯೂತವನ್ನು ನಿವಾರಣೆಗೊಳಿಸುತ್ತದೆ.
ನೋವು ನಿವಾರಣೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳಿರುವುದರಿಂದ ಹೊಟ್ಟೆ ನೋವಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನೂ ತೊಡೆದು ಹಾಕುವುದಲ್ಲದೇ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಜತೆಗೆ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವ ಶಕ್ತಿಯನ್ನು ಹೊಂದಿದೆ.