ನವದೆಹಲಿ: ಇಂದು ಹೈಕಮಾಂಡ್ ಸೂಚನೆಯ ಮೇರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡಿದರು. ಈ ವೇಳೆ ನನಗೆ ಕೊಟ್ಟರೆ ಸಿಎಂ ಕೊಡಿ, ಇಲ್ಲದಿದ್ದರೇ ಯಾವುದೇ ಹುದ್ದೆ ಬೇಡ ಎಂಬುದಾಗಿ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.
ನವದೆಹಲಿಯಲ್ಲಿರುವಂತ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದಂತ ಡಿಕೆಶಿ ಜೊತೆಗೆ, ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಆಯ್ಕೆ ಕುರಿತಂತೆ ಚರ್ಚೆ ನಡೆಸಿದರು.
ಸಿಎಂ ಪರ್ಯಾಯವಾಗಿ ಬೇರೆ ಹುದ್ದೆಯನ್ನು ನೀಡುವುದಾಗಿ ಡಿಕೆ ಶಿವಕುಮಾರ್ ಮುಂದೆ ಖರ್ಗೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ನನಗೆ ಕೊಟ್ಟರೆ ಸಿಎಂ ಕೊಡಿ, ಇಲ್ಲದಿದ್ದರೇ ಬೇರೆ ಹುದ್ದೆ ಬೇಡ ಎಂಬುದಾಗಿ ಖರ್ಗೆ ಮುಂದೆಯೆ ಪಟ್ಟು ಸಡಿಲಿಸದೇ ಹೇಳಿದ್ದಾರೆ ಎನ್ನಲಾಗುತ್ತಿದೆ.
ಸಿಎಂ ಹುದ್ದೆಗೆ ಪರ್ಯಾಯ ಯಾವುದೇ ಹುದ್ದೆ ನನಗೆ ಬೇಡ. ನಾನು ಶಾಸಕನಾಗಿಯೇ ಮುಂದುವರೆಯುತ್ತೇನೆ. ಕೊಡುವುದಾದರೇ ಸಿಎಂ ಕೊಡಿ ಎಂಬುದಾಗಿ ತಮ್ಮ ಬಿಗಿ ಪಟ್ಟು ಖರ್ಗೆ ಮುಂದೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಮುಂದೆ ತಮ್ಮ ಸಿಎಂ ಹುದ್ದೆ ಬೇಡಿಕೆ ಇಟ್ಟ ಬಳಿಕ ಅಲ್ಲಿಂದ ಡಿಕೆ ಶಿವಕುಮಾರ್ ವಾಪಾಸ್ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಕೆಶಿ ಬೇಡಿಕೆ ಬಗ್ಗೆ ಖರ್ಗೆ ಮಣಿಯುತ್ತಾರಾ ಎಂಬುದಾಗಿ ಕಾದು ನೋಡಬೇಕಿದೆ.