ಹಿರಿಯ ನಾಯಕರು ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ -ಸದಾನಂದಗೌಡ

ಮಂಡ್ಯ:- ಮಾಜಿ ಸಿಎಂ ಸದಾನಂದಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು, ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಹಿರಿಯ ನಾಯಕರು ಆಲೋಚನೆ ಮಾಡಬೇಕು ಎಂದರು. ಹಿರಿಯ ನಾಯಕರ ಅನುಭವ ಹಾಗೂ ಅವರ ಹಿಂಬಾಲಕರ ಪಡೆಯನ್ನು ಹೈಕಮಾಂಡ್​ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬುದರ ಕುರಿತು ಚಿಂತನೆ ನಡೆಸಬೇಕು ಎಂದಿದ್ದಾರೆ.

ಹಿರಿಯ ನಾಯಕರಿಗೆ ಹೆಚ್ಚಿನ ಅನುಭವ ಇರುತ್ತದೆ. ಅವರಿಗೆ ಅವರದ್ದೆ ಆದ ಹಿಂಬಾಲಕರ ಪಡೆ ಇರುತ್ತದೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ವರಿಷ್ಠರು ಚಿಂತನೆ ನಡೆಸಬೇಕು. ನನ್ನನ್ನು ಉಪಯೋಗಿಸಿಕೊಂಡರೆ ಪಕ್ಷಕ್ಕಾಗಿ ದುಡಿಯುತ್ತೇನೆ ಇಲ್ಲವಾದಲ್ಲಿ ಸುಖ ಜೀವನದಲ್ಲಿ ಇರುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್​ ವಿರುದ್ಧ ಗುಡುಗಿದ್ದಾರೆ.

ಸತ್ತಾಗ ನನ್ನ ದೇಹದ ಮೇಲೆ ಬಿಜೆಪಿ ಬಾವುಟ ಹಾಕಬೇಕು ಎಂಬ ರಾಜನೀತಿ ನನ್ನದಲ್ಲ. ಹೊಸ ಅಭ್ಯರ್ಥಿ ಹುಡುಕಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಚುನಾವಣೆಗೂ ಆರು ತಿಂಗಳ ಮುಂಚೆಯೇ ನನ್ನ ನಿರ್ಧಾರವನ್ನು ತಿಳಿಸಿದ್ಧೇನೆ. ನನ್ನ ಕ್ಷೇತ್ರದಲ್ಲಿ ಸುಮಲತಾ ಅವರು ಸ್ಪರ್ಧಿಸುವ ಬಗ್ಗೆ ಹೈಕಮಾಂಡ್​ ನಿರ್ಧರಿಸುತ್ತದೆ ಎಂದಿದ್ದಾರೆ.

 

Loading

Leave a Reply

Your email address will not be published. Required fields are marked *