ಬೆಂಗಳೂರು: ಕರ್ನಾಟಕದಲ್ಲಿ ಕಾಮಗಾರಿಗಳ ಬಿಲ್ ಬಾಕಿ ಬಿಡುಗಡೆಗೆ ಕಮಿಷನ್ ಕೇಳಲಾಗುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ನಿವಾಸದೆದುರು ಮಾಧ್ಯಮಗಳ ಎದುರು ಮಾತನಾಡಿದ ಅವರು, ಏನೂ ಆರೋಪ ಮಾಡ್ತಾರೆ ಮಾಡ್ಲಿ, ಅವರೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತಾಡಬೇಕು ಹಾಗೆ ಅವರ ಪಕ್ಷದ ನಾಯಕರೂ ತನಿಖೆ ಮಾಡಿ ಎಂದು ನಮ್ರತೆಯಿಂದ ಮನವಿ ಮಾಡಿದ್ರು ಆದ್ರೂ ಕೆಲಸ ಮಾಡಿದವರ ಬಿಲ್ ಏಕೆ ಅವರು ಕೊಡಲಿಲ್ಲ? ಕಂಟ್ರಾಕ್ಟರುಗಳು ಯಾರಿಗೆ ಎಷ್ಟು ಕೊಟ್ಟಿದಾರೆ ಎಂದು ಚರ್ಚೆ ಮಾಡಲು ಹೋಗಲ್ಲ ಎಂದು ಹೇಳಿದರು.
10ರಿಂದ 15 ಪರ್ಸೆಂಟ್ ಕಮಿಷನ್ ಕೇಳಿದ್ರು ಅಂತಾರೆ ಯಾರು ಕೇಳಿದ್ರು? ಹೇಳಲಿ ನೋಡೋಣ ನಾನು ಏನಾದರೂ ಕೇಳಿದ್ರೆ ಇವತ್ತೆ ರಾಜಕೀಯ ನಿವೃತ್ತಿ ಆಗುವೆ ಆದರೆ ಇಲ್ಲ ಅಂತಾದರೆ ಬೊಮ್ಮಾಯಿ ಆಗ್ತಾರಾ? ಅಶೋಕ ಆಗ್ತಾನಾ..? ಒಂದು ಕಾಲು ಲಕ್ಷ ವೋಟಲ್ಲಿ ಸೋತು ಡೆಪಾಸಿಟ್ ಕಳ್ಕೊಂಡು ಇನ್ನೇನು ಆಗಬೇಕು ಎಂದು ಅಶೋಕ್ ವಿರುದ್ಧ ಏಕವಚನದಲ್ಲಿ ವಾಗ್ಗಾಳಿ ನಡೆಸಿದರು.