ತುಮಕೂರು: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಬೇಕು ಎನ್ನುವುದು ನಾನು ಸೇರಿದಂತೆ ಎಲ್ಲಾ ಶಾಸಕರ ಅಭಿಪ್ರಾಯ. ಸಿಎಂ ವಿಚಾರ ನಾನು ಹೈಕಮಾಂಡ್ಗೆ ಬರೆಯುವ ಪತ್ರದಲ್ಲಿ ಇರುವುದಿಲ್ಲ ಎಂದು ಸಹಕಾರಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಸಿಎಂ ಆಯ್ಕೆ ಹೈಕಮಾಂಡ್ ಮಾಡಿತ್ತು. ಉಪ ಮುಖ್ಯಮಂತ್ರಿ ಕೂಡ ಹೈಕಮಾಂಡ್ ಮಾಡಿತ್ತು. ಒಬ್ಬರೇ ಡಿಸಿಎಂ ಆಗಬೇಕು ಎಂದು ಡಿಕೆ ಶಿವಕುಮಾರ್ ಹೈಕಮಾಂಡ್ಗೆ ಷರತ್ತು ಹಾಕಿರುವ ಬಗ್ಗೆ ಗೊತ್ತಿಲ್ಲ. ಮೂವರು ಡಿಸಿಎಂ ವಿಚಾರಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದರೆ ಹೈಕಮಾಂಡ್ಗೆ ಹೇಳಲಿ. ಸಿಎಂ ಅಧಿಕಾರ ಹಂಚಿಕೆ 50:50 ಅನುಪಾತದಲ್ಲಿ ಎಂದು ಯಾರೂ ಹೇಳಿಲ್ಲ ಎಂದರು.
ಲೋಕಸಭಾ ಚುನಾವಣೆಯ ಹಿತ ದೃಷ್ಟಿಯಿಂದ ಮೂವರು ಡಿಸಿಎಂ ಮಾಡುವ ಅವಶ್ಯಕತೆ ಇದೆ. ಎಸ್ಸಿ, ಎಸ್ಟಿ, ಲಿಂಗಾಯತ, ಅಲ್ಪ ಸಂಖ್ಯಾತ ಸಮುದಾಯದವರನ್ನು ಡಿಸಿಎಂ ಮಾಡಬೇಕು. ಹೈಕಮಾಂಡ್ಗೆ ಖುದ್ದಾಗಿ ಭೇಟಿಯಾಗಿ ಮನವಿ ಕೊಡುತ್ತೇನೆ. ನಾನು ಇಂತಹವರನ್ನೇ ಡಿಸಿಎಂ ಮಾಡಬೇಕು ಎಂದು ಯಾರ ಹೆಸರನ್ನೂ ಹೇಳಲ್ಲ. ಆ ಸಮುದಾಯದ ಪ್ರಮುಖರನ್ನು ಗುರುತಿಸಿ ಕೊಡಬೇಕು. ನಾನು ಯಾವುದೇ ಕಾರಣಕ್ಕೂ ಡಿಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟನೆ ನೀಡಿದರು.