ನಾನು ಇಸ್ರೋ ಮತ್ತು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ: ಪ್ರಧಾನಿ ಮೋದಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ISRO) ಮಹತ್ವದ ಚಂದ್ರಯಾನ-3 (Chandrayaan-3) ಸಕ್ಸಸ್ಆಗಿದೆ. ಚಂದ್ರನ ದಕ್ಷಿಣ ದಕ್ಷಿಣ ಧ್ರುವದಲ್ಲಿ ವಿಕ್ರಮ್ಲ್ಯಾಂಡರ್ಯಶಸ್ವಿಯಾಗಿ ಕಾಲಿಟ್ಟಿದೆ. ಇಸ್ರೋದ ಐತಿಹಾಸಿದ ಸಾಧನೆಗೆ ಪ್ರಧಾನಿ ಮೋದಿ (Narendra Modi) ಅವರು ದಕ್ಷಿಣ ಆಫ್ರಿಕಾದಿಂದಲೇ ಶುಭಾಶಯ ತಿಳಿಸಿದರು.

ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರಧಾನಿ ಮೋದಿ ಸಂಭ್ರಮ ಹಂಚಿಕೊಂಡರು ವೇಳೆ ಮಾತನಾಡಿದ ಪ್ರಧಾನಿ, ನಾನು ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಚಂದ್ರಯಾನ ಮೇಲಿತ್ತು. ಚಂದ್ರಯಾನ ಯಶಸ್ವಿ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ನಾನು ನಮ್ಮ ಜನರ ಖುಷಿಯ ಸಮಯದಲ್ಲಿ ಭಾಗಿಯಾಗಿದ್ದೇನೆ. ನಾನು ಇಸ್ರೋ ಮತ್ತು ದೇಶದ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಚಂದ್ರನ ದಕ್ಷಿಣ ಭಾಗಕ್ಕೆ ಭಾರತ ಮಾತ್ರ ಹೋಗಿದೆ. ಈವರೆಗೂ ಯಾವ ದೇಶವೂ ಭಾಗಕ್ಕೆ ತೆರಳಿಲ್ಲ. ಇನ್ಮುಂದೆ ಚಂದ್ರನ ಕಥೆಗಳು ಬದಲಾಗಲಿವೆ. ದಿನವನ್ನು ದೇಶ ಸದಾ ನೆನಪಿನಲ್ಲಿ ಇಡುತ್ತದೆ. ಹೊಸ ಸಂಕಲ್ಪ ಈಡೇರಿಸುವ ಶುಭ ದಿನವಾಗಿದೆ. ಭವಿಷ್ಯದ ಮಿಷನ್ಗಾಗಿ ಶುಭ ಹಾರೈಕೆಗಳು ಎಂದರು

 

Loading

Leave a Reply

Your email address will not be published. Required fields are marked *